ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ಶುಕೂರು, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಅರ್ಶದಿ, ಕೋಶಾಧಿಕಾರಿಯಾಗಿ ಎಸ್. ಇಕ್ಬಾಲ್

0

ನೆಲ್ಯಾಡಿ: ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಶುಕೂರು ಕೆಜಿಎನ್., ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಅರ್ಶದಿ ಹಾಗೂ ಕೋಶಾಧಿಕಾರಿಯಾಗಿ ಎಸ್.ಇಕ್ಬಾಲ್ ಆಯ್ಕೆಯಾದರು.


ಜೂ.27ರಂದು ಮಸೀದಿಯ ನೂರಾನಿಯ ಮದ್ರಸಾ ಹಾಲ್‌ನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ಎಸ್.ಸೈಯ್ಯದ್ ಬಾವಾ ತಂಙಳ್, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಕುಂಞಿ ಕೊಂಕೋಡಿ, ಎಸ್.ಕೆ.ರಝಾಕ್, ಕಾರ್ಯದರ್ಶಿಯಾಗಿ ರಂಜಾನ್ ಸಾಹೇಬ್, ಲೆಕ್ಕ ಪರಿಶೋಧಕರಾಗಿ ಕೆ.ಪಿ.ಅಬೂಬಕ್ಕರ್ ಹಾಗೂ ಮದ್ರಸಾ ಉಸ್ತುವಾರಿಯಾಗಿ ಕೆ.ಕೆ.ಉಸ್ಮಾನ್ ಹಾಜಿ ಇವರನ್ನು ಆಯ್ಕೆ ಮಾಡಲಾಯಿತು.

ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ ಉಸ್ತಾದ್‌ರವರು ಅಧ್ಯಕ್ಷತೆ ವಹಿಸಿದ್ದರು. ಗೋಳಿತ್ತೊಟ್ಟು ಕೊಚ್ಚಿಲ ರಹ್‌ಮಾನಿಯಾ ಜಮೀಲ ಜುಮಾ ಮಸೀದಿ ಖತೀಬ್ ಅಬ್ದುಲ್ ರಹ್‌ಮಾನ್ ಫೈಝಿ ದು:ವಾ ನೆರವೇರಿಸಿದರು. ಹಿಂದಿನ ಸಾಲಿನ ಮಸೀದಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಕೋಶಾಧಿಕಾರಿ ಕೆ.ಎಸ್.ನಾಸೀರ್ ಸಮರಗುಂಡಿ ಶುಭಹಾರೈಸಿದರು.

ಸನ್ಮಾನ:
ಮಸೀದಿಯ ಅಭಿವೃದ್ಧಿಗಾಗಿ ದುಡಿದ ಕೆ.ಕೆ.ಅಬೂಬಕ್ಕರ್, ಕೆ.ಎಸ್.ನಾಸಿರ್, ಅಬ್ದುಲ್ಲಾ ಕುಂಞಿ ಕೊಂಕೋಡಿ, ಎಸ್.ಇಕ್ಬಾಲ್, ಎಸ್.ಕೆ.ರಝಾಕ್, ಕೆ.ಪಿ.ಅಬೂಬಕ್ಕರ್, ಶಮೀರ್ ಅರ್ಶದಿ, ರಂಜಾನ್ ಸಾಹೇಬ್ ಹಾಗೂ ಉಪ್ಪಿನಂಗಡಿ ರೇಂಜ್ ಜಂ ಇಯ್ಯುತ್ತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೋಲ್ಪೆ ಮಸೀದಿ ಖತೀಬ್ ಇಸ್ಹಾಕ್ ಫೈಝಿ ಪಣ್ಯ ಇವರನ್ನು ಖಲಂದರ್ ಷಾ ದಫ್ ಸಮಿತಿ ಕೋಲ್ಪೆ ಇದರ ವತಿಯಿಂದ ಸನ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶಮೀರ್ ಅರ್ಶದಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್ ಹಾಜಿ ವರದಿ ವಾಚಿಸಿದರು. ಕಾರ್ಯದರ್ಶಿ ರಂಜಾನ್ ಸಾಹೇಬ್ ಲೆಕ್ಕಪತ್ರ ಮಂಡಿಸಿದರು.

LEAVE A REPLY

Please enter your comment!
Please enter your name here