
ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 30ನೇ ವರ್ಷದ ಸಂಭ್ರಮದ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಅನೇಕ ಯೋಜನೆಯಿದ್ದು ಅದರ ಒಂದು ಪ್ರಯೋಗವಾಗಿ ‘ತ್ರಿಶಕ್ತಿ’ ಎಂಬ ಸಂಶೋಧನಾತ್ಮಕ ಪ್ರಸ್ತುತಿಯು ನೃತ್ಯಾಂತರಂಗ 131ರಲ್ಲಿ ಜು.5ರಂದು ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.
ಚೆನ್ನೈನ ರೆನಾಲ್ಟ್ ನಿಸಾನ್ ತಂತ್ರಜ್ಞಾನ ಕೇಂದ್ರದ ಪ್ರಬಂಧಕರೂ, ವಿದ್ವಾನ್ ದೀಪಕ್ ಕುಮಾರ್ ರವರ ಹಿರಿಯ ಭರತನಾಟ್ಯ ಶಿಷ್ಯರೂ ಆದ ಗುರುಪ್ರಸಾದ್, ಐ. ಆರ್ ಅವರು ನೃತ್ಯಕಲೆಯ ಮಹತ್ವವನ್ನು ಹೇಳಿದರು.
ಸಂಸ್ಥೆಯ ಹಿರಿಯ ಕಲಾವಿದರಾದ ವಿದ್ವಾನ್ ಗಿರೀಶ್ ಕುಮಾರ್, ಸೌಜನ್ಯ ಪಡ್ವೆಟ್ನಾಯ, ಆಕ್ಷತಾ ಕೆ. ವಸುಧಾ ಜಿ.ಎನ್, ಅಪೂರ್ವ ಗೌರಿ ದೇವಸ್ಯ, ಶಮಾ ಚಂದುಕೂಡ್ಲು, ಪ್ರಣಮ್ಯ ಪಾಲೆಚ್ಚಾರು ಮತ್ತು ವಿಭಾಶ್ರೀ ವಿ. ಗೌಡ ‘ತ್ರಿಶಕ್ತಿ’ ಎಂಬ ವಿಷಯಾಧಾರಿತ ನೃತ್ಯಪ್ರಸ್ತುತಿ ಮಾಡಿದರು.
ಹಿಮ್ಮೇಳದ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಮತ್ತು ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು.