ಪುತ್ತೂರು: ಸ್ವಂತ ಮನೆಯ ಕನಸು ಕಾಣುತ್ತಿರುವವರಿಗಾಗಿ ಬಂಟ್ವಾಳದ ಪೇರಮೊಗ್ರು ಗ್ರಾಮದ ನೀರಪಾದೆ ಬಾಳ್ತಿಲದಲ್ಲಿ ಜಿಕೆ ಗ್ರೂಪ್ಸ್ ನವರ ‘ಶ್ರೀ ಗೌರಿ ಕೃಷ್ಣ’ ಪ್ರಶಾಂತ ಪ್ರಕೃತಿ ಮಡಿಲು ಫಾರ್ಮ್ ಲ್ಯಾಂಡ್ ಸಿದ್ದವಾಗಿದ್ದು, ಗಣಪತಿ ಪೂಜೆ ಹಾಗೂ ಭೂಮಿ ಪೂಜೆ ನೆರವೇರಿಸಲಾಯಿತು.

ಧಾರ್ಮಿಕ ಕಾರ್ಯದ ಬಳಿಕ ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಲೇಔಟ್ ಉದ್ಯಮಿ ರಾಘವೇಂದ್ರ ಮಯ್ಯ ಅವರು ‘ಶ್ರೀ ಗೌರಿ ಕೃಷ್ಣ’ ಪ್ರಶಾಂತ ಪ್ರಕೃತಿ ಮಡಿಲು ಫಾರ್ಮ್ ಲ್ಯಾಂಡ್‌ನ ಬ್ರೋಷರ್ ಬಿಡುಗಡೆಗೊಳಿಸಿ, ಗಿರಿ ಶಂಕರ ಹಾಗೂ ಅವರ ಮಗ ಅಜೇಯ ಕೃಷ್ಣ ಅವರದ್ದು ಸಾತ್ವಿಕ ಗುಣ, ಈ ಸಮಾಧಾನವೇ ಅವರ ಮುಂದಿನ ನಡೆಗೆ ಶ್ರೇಯಸ್ಸು ತರಲಿ ಎಂದು ಹಾರೈಸಿದರು. ಗಣ್ಯರು ‘ಶ್ರೀ ಗೌರಿ ಕೃಷ್ಣ’ ಪ್ರಶಾಂತ ಪ್ರಕೃತಿ ಮಡಿಲು ಫಾರ್ಮ್ ಲ್ಯಾಂಡ್‌ಗೆ ಶುಭ ಹಾರೈಸಿದರು.
ಈ ಸಂದರ್ಭಲ್ಲಿ ಇಂಜಿನಿಯರ್ ವಿಜಯ್, ಶಂಕರ ಭಟ್,ಬಾಳ್ತಿಲ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್, ಪಂಚಾಯತ್ ಮೆಂಬರ್ ಶಿವರಾಜ್, ಫಾರ್ಮ್ ಲ್ಯಾಂಡ್‌ಗಾಗಿ ಜಾಗ ನೀಡಿದ ಅಶೋಕ್ ಹಾಗೂ ಮನೆಯವರು ಉಪಸ್ಧಿತರಿದ್ದರು.
ಗಿರಿ ಶಂಕರ ಹಾಗೂ ಅವರ ಮಗ ಅಜೇಯ ಕೃಷ್ಣ ಅವರ ಮಾಲಕತ್ವದ ‘ಶ್ರೀ ಗೌರಿ ಕೃಷ್ಣ’ ಪ್ರಶಾಂತ ಪ್ರಕೃತಿ ಮಡಿಲು ಫಾರ್ಮ್ ಲ್ಯಾಂಡ್ ಪ್ರಕೃತಿ ಸೊಬಗಿನ ನಡುವೆ ತೆರೆದುಕೊಂಡಿದೆ. ಸುಮಾರು 4 ಎಕರೆ 30 ಸೆನ್ಸ್ ಜಾಗದಲ್ಲಿ ಪಕ್ಕಾ ವಸ್ತು ಪ್ರಕಾರವಾಗಿ 40 ಫ್ಲಾಟ್‌ಗಳು ಲಭ್ಯವಿದೆ. ಹೂವು ಮತ್ತು ಹಣ್ಣಿನ ಗಿಡಗಳು, ಆಟದ ಪ್ರದೇಶ, ಉದ್ಯಾನವನ, ಧ್ಯಾನಮಂದಿರ, ಮೂಲಭೂತ ಸೌಕರ್ಯ, ಇಂಟರ್ ಲಾಕ್ ರಸ್ತೆ, ಹತ್ತಿರದಲ್ಲೆ ಶಾಲೆಗಳು ಕಾಲೇಜುಗಳು ಹಾಗೂ ಆಸ್ಪತ್ರೆಗಳು ಇದೆ. ‘ಶ್ರೀ ಗೌರಿ ಕೃಷ್ಣ’ ಫಾರ್ಮ್ ಲ್ಯಾಂಡ್ ನಿಮ್ಮ ಕನಸಿನ ಮನೆಯನ್ನ ನನಸಾಗಿಸಲಿದೆ..