ಬೆಳ್ಳಾರೆ: ಮಾರ್ಚ್ 8ರಂದು ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು 4 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿಯುವ ಐವರ್ನಾಡು ಮೂಲೆ ಮನೆಯ ಎಂ.ದೇವಿಪ್ರಸಾದ್ ಅವರು ಚಿಕಿತ್ಸೆಗೆ ಧನ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಮಾ.8ರಂದು ಕೆಲಸ ಮುಗಿಸಿ ಸುಬ್ರಹ್ಮಣ್ಯ ಕಡೆಯಿಂದ ಬರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರ ಗಾಯಗೊಂಡ ದೇವಿಪ್ರಸಾದ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹಣೆ ಮತ್ತು ಮೂಗಿಗೆ ತೀವ್ರ ಗಾಯವಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ. ನಂತರ ತಲೆನೋವು ಮತ್ತು ತೀವ್ರ ಜ್ವರ ಬಂದು CSE infection ಆಗಿದ್ದು, 4ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಯಾವುದೇ ಸುಧಾರಣೆಯಾಗಿಲ್ಲ. ಈವರೆಗೆ ಸುಮಾರು 8ಲಕ್ಷ ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆಗೆ 5ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ಹಣಕಾಸಿನ ನೆರವು ನೀಡುವಂತೆ ದಾನಿಗಳಲ್ಲಿ ಎಂ.ದೇವಿಪ್ರಸಾದ್ ಅವರ ಪತ್ನಿ ಸುಖಲತಾ ಮನವಿ ಮಾಡಿದ್ದಾರೆ.
Canara bank
A/c no. 01002210049168
IFSC code: CNRB0010254
Branch: Bellare
Name: sukalatha
