ಬೆಟ್ಟಂಪಾಡಿ: ಮಂಡ್ಯದಲ್ಲಿ ಜು. 6 ರಂದು ನಡೆದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ದಕ್ಷಿಣ ಪ್ರಾಂತದ ಅಭ್ಯಾಸ ವರ್ಗದಲ್ಲಿ ಶ್ರೀಜಿತ್ ರೈ ಅವರನ್ನು ಮಂಗಳೂರು ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ನಿರ್ಧಾರವನ್ನು ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ಹಿರಿಯ ಕಾರ್ಯಕರ್ತರು ಪ್ರಕಟಿಸಿದರು. ಶ್ರೀಜಿತ್ ರೈ ಅವರು ಈ ಹಿಂದೆ ಮೂಡುಬಿದಿರೆ ತಾಲೂಕಿನ ತಾಲೂಕು ಸಂಚಾಲಕರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಹೊರಾಟ, ಪ್ರತಿಭಟನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ರಾಜ್ಯಮಟ್ಟದ ತಾಂತ್ರಿಕ ಉತ್ಸವ ಸೃಷ್ಟಿ 2025 ರ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.
ಎಬಿವಿಪಿಯಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು 2021ರಲ್ಲಿ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗದ ಸಂದರ್ಭದಲ್ಲಿ ಆರಂಭಿಸಿದರು.
ಬೆಟ್ಟಂಪಾಡಿಯ ಪ್ರಭಾಕರ್ ರೈ ಬಾಜುವಳ್ಳಿ ಮತ್ತು ಸ್ನೇಹಲತಾ ರೈ ದಂಪತಿಗಳ ಪುತ್ರರಾಗಿರುವ ಶ್ರೀಜಿತ್, ಪ್ರಸ್ತುತ ಮೂಡುಬಿದಿರೆಯ ಮಂಗಳೂರು ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.