ಪುತ್ತೂರು: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಮಲ್ಲಿಕಾ ಜೆ.ರೈ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರಬೇಕೆಂದು ಮಾರ್ಗಸೂಚಿಯಾಗಿ ಮಾತನಾಡಿದರು.

ನಾಯಕರು ಸ್ವ-ಪ್ರಯತ್ನ ಹಾಗೂ ಇತರರ ಸಹಕಾರದೊಂದಿಗೆ ಯಶಸ್ಸು ಸಾಧಿಸಲು ಸಾಧ್ಯವಿದೆ. ನಾಯಕರಲ್ಲಿ ಜವಾಬ್ದಾರಿ, ಸಮಗ್ರತೆ, ಕಾವ್ಯ ನಿಷ್ಠೆ ಗುಣಗಳಿರಬೇಕು. ಕಠಿಣ ಪರಿಕ್ರಮ ಸ್ವಾಭಿಮಾನಗಳು ಯಶಸ್ವಿಯ ಸೂತ್ರಗಳು ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲೆ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು ಮತ್ತು ಪ್ರಮಾಣ ವಚನ ಬೋಧಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜೋರೋಮಿಯಸ್ ಪಾಯಸ್, ಚಂದ್ರಕಾಂತ್ ನಾಯಕ್ ಮತ್ತು ಅಬ್ದುಲ್ ಅಜೀಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಜನಿ ಮತ್ತು ಜ್ಞಾನವಿ ಪ್ರಾರ್ಥಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಚಿತ್ರಲೇಖ ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ರಂಜಿನಿ ವಂದಿಸಿದರು. ವಿದ್ಯಾರ್ಥಿನಿ ಫಾತಿಮತ್ ಅನ್ನಾ ಕಾರ್ಯಕ್ರಮ ನಿರೂಪಿಸಿದರು.