ಪುತ್ತೂರು: ತಾ.ಪಂ. ಮಾಜಿ ಸದಸ್ಯೆ ರೇಖಾ ನಾಗರಾಜ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ನಿನ್ನೆ ಬಡಗನ್ನೂರಿಗೆ ಕೆಲಸದ ನಿಮಿತ್ತ ಸಭೆಗೆ ತೆರಳಿದ್ದೆ, ಅಲ್ಲಿ ನನ್ನ ಕೆಲಸದ ಫಾರ್ಮ್ ಅನ್ನು ಅವರು ಪರಿಶೀಲನೆ ನಡೆಸಿದರು. ಬಳಿಕ ನಾನು ಅಲ್ಲಿಂದ ಹೊರಟಾಗ ನೀವು ಮೀಟಿಂಗ್ ಗೆ ಬಂದಿದ್ದೀರ ಎನ್ನುವ ಉದ್ದೇಶದಿಂದ ಒಂದು ಫೋಟೋ ತೆಗೆಯುವ ಅಂತ ಹೇಳಿದ್ರು ಆದ್ರೆ ಅವರು ತೆಗೆದ ಫೋಟೊವನ್ನು ದುರುಪಯೋಗ ಪಡೆಸಿಕೊಂಡು ಕಾಂಗ್ರೆಸ್ ಗೆ ಸೇರ್ಪಡೆ ಎನ್ನುವ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ. ಇದರಿಂದ ನನ್ನ ಮನಸಿಗೆ ಬಹಳ ನೋವಾಗಿದೆ. ಯಾಕಂದ್ರೆ ನಮ್ಮ ಕುಟುಂಬ ಬಿಜೆಪಿಯಲ್ಲಿದೆ. ನನಗೆ ಬಿಜೆಪಿಯಿಂದಾಗಿ ಉತ್ತಮ ಸ್ಥಾನಮಾನ ಕೂಡ ಲಭ್ಯವಾಗಿದೆ, ನಾನು ತಾಲೂಕು ಪಂಚಾಯತ್ ಸದಸ್ಯಳಾಗಿ, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷಳಾಗಿ ಐದು ವರ್ಷಗಳ ಕಾಲ ನನ್ನಿಂದಾಗುವಂತಹ ಕೆಲಸವನ್ನು ಬಿಜೆಪಿಗೆ ಕೊಟ್ಟಿದ್ದೇನೆ. ಹಾಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ವಿಷಯವೆಂದು’ ಅವರು ತಿಳಿಸಿದ್ದಾರೆ.