ಪುತ್ತೂರು: ಬಿಎಸ್‌ಎನ್‌ಎಲ್ ನಿವೃತ್ತ ಚೀಫ್ ಟೆಕ್ನಿಕಲ್ ಸೂಪರ್‌ವೈಸರ್ ಆಗಿದ್ದ ಹಾರಾಡಿ ನಿವಾಸಿ ಕೆ.ಗೋಪಾಲಕೃಷ್ಣ ನಾಯಕ್(82ವ)ರವರು ಜು.10ರಂದು ಸಂಜೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಹಾರಾಡಿ ನಿವಾಸಿಯಾಗಿದ್ದ ಕೆ. ಗೋಪಾಲಕೃಷ್ಣ ನಾಯಕ್ ಅವರು 2003ರಲ್ಲಿ ಬಿಎಸ್‌ಎನ್‌ಎಲ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಲತಾ ನಾಯಕ್, ತಿರುವಂನಂತಪುರನಲ್ಲಿ ಭಾರತ ಸರಕಾರದ ಎಸ್‌ಟಿಪಿಐ ಸಂಸ್ಥೆಯ ನಿರ್ದೇಶಕರಾಗಿರುವ ಪುತ್ರ ಗಣೇಶ್ ನಾಯಕ್, ಪುತ್ರಿ ಜ್ಯೋತಿ ಕಾಮತ್, ಅಳಿಯ ನಾರಾಯಣ ಕಾಮತ್, ಸೊಸೆ ಆರತಿ ನಾಯಕ್ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ನಾಳೆ ಜು.11ಕ್ಕೆ ಅಂತ್ಯ ಸಂಸ್ಕಾರ:
ಕೆ.ಗೋಪಾಲಕೃಷ್ಣ ನಾಯಕ್ ಅವರ ಅಂತ್ಯ ಸಂಸ್ಕಾರವು ಜು.11ರಂದು ಬೆಳಗ್ಗೆ ಗಂಟೆ 11ರ ನಂತರ ಪುತ್ತೂರಿನಲ್ಲಿ ನಡೆಯಲಿದೆ ಎಂದು ಮೃತರ ಪುತ್ರ ಗಣೇಶ್ ನಾಯಕ್ ತಿಳಿಸಿದ್ದಾರೆ.