ಪುತ್ತೂರು: ಗುರು ಪೂರ್ಣಿಮೆಯ ಅಂಗವಾಗಿ ಕುಂಬ್ರ ಬಿಜೆಪಿ ವತಿಯಿಂದ ನಿವೃತ್ತ ಶಿಕ್ಷಕ ಸುಧಾಕರ ರೈಯವರಿಗೆ ಗುರುವಂದನಾ ಕಾರ್ಯಕ್ರಮ ಜು.10 ರಂದು ನಡೆಯಿತು. ಸುಧಾಕರ ರೈಯವರ ನಿವಾಸದಲ್ಲಿ ಅವರನ್ನು ಶಾಲು, ಫಲಪುಷ್ಪ ಗುರು ಕಾಣಿಕೆ ಅರ್ಪಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟೆಲಿಕಾಂ ಸಲಹಾ ಸಮಿತಿ ಜಿಲ್ಲಾ ಸದಸ್ಯ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ನೆ. ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಬೂತ್ ಅಧ್ಯಕ್ಷ ಅರುಣ್ ರೈ ಬಿಜಳ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಶಿವರಾಮ ಗೌಡ ಬೊಳ್ಳಾಡಿ, ಶ್ರೀನಿವಾಸ ಪ್ರಸಾದ್ ಮುಡಾಲ, ಬೂತ್ ಅಧ್ಯಕ್ಷ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.