ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ಜಾಗೃತಿ ಪ್ರಾಜೆಕ್ಟ್ ನಡಿಯಲ್ಲಿ “ರೋಟರಿ ರೈಡ್ ರೈಟ್” ಬ್ಯಾನರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಯುವದ ಪದ ಪ್ರದಾನ ಸಮಾರಂಭದಲ್ಲಿ ರಸ್ತೆ ಸುರಕ್ಷತಾ ಯೋಜನೆಯ ಜಿಲ್ಲಾ ಚೇರ್ಮನ್ ಡಾ.ಹರ್ಷಕುಮಾರ್ ರೈರವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಜನ ಜಾಗೃತಿ ಯೋಜನೆಯ “ರೋಟರಿ ರೈಡ್ ರೈಟ್” ಇದರ ಬ್ಯಾನರ್ ಅನ್ನು ಇತ್ತೀಚೆಗೆ ಪಿ.ಎಸ್.ಐ ಹುದ್ದೆಗೆ ಭಡ್ತಿ ಹೊಂದಿರುವ ಸಂಚಾರಿ ಠಾಣೆಯ ಪಿ.ಎಸ್.ಐ ಚಕ್ರಪಾಣಿರವರು ಲಾಂಚ್ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಯುವದ ಅಧ್ಯಕ್ಷ ಕುಸುಮ್ ರಾಜ್, ಪಿಡಿಜಿ ರಂಗನಾಥ್ ಭಟ್, ಸಹಾಯಕ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಭರತ್ ಪೈ, ರೋಟರಿ ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ದಿನೇಶ್ ಕುಮಾರ್ , ಕಾರ್ಯದರ್ಶಿ ಅಭೀಷ್, ರೋಟರಿ ಯುವ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಮುಳಿಯ, ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಅಪಘಾತ ಪ್ರದೇಶ ಗುರುತಿಸಿ ಸುರಕ್ಷತೆಯ ಕ್ರಮ ಅಳವಡಿಸುವುದು, ರಸ್ತೆ ಸವಾರ ರನ್ನು ಜಾಗೃತಿಗೊಳಿಸುವುದು, ಶಾಲಾ ಕಾಲೇಜುಗಳಲ್ಲಿ ಸುರಕ್ಷತೆ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಸೇರಿದ್ದು ಪ್ರತೀ ತಿಂಗಳು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ಧೇಶವಾಗಿದೆ.