ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಅರಿಯಡ್ಕ ವಲಯದ ಮೇನಲ ಕಾರ್ಯಕ್ಷೇತ್ರದಲ್ಲಿ ‘ನಂದಾದೀಪ ’ಎಂಬ ಹೊಸ ಜ್ಞಾನವಿಕಾಸ ಕೇಂದ್ರವನ್ನು ಉದ್ಘಾಟನೆಯನ್ನು ಮೇನಲ ಒಕ್ಕೂಟದ ಅಧ್ಯಕ್ಷೆ ಗೀತಾ ನಾಗಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.
ಕೇಂದ್ರದ ಉದ್ಘಾಟನೆಯನ್ನು ಕೃಷ್ಣ ಪ್ರಸಾದ್ ಅಮ್ಮಂಕಲ್ಲು ಇವರು ನೆರವೇರಿಸಿ, ಮನೆಯನ್ನು ಬೆಳಗುವವರು ತಾಯಂದಿರು ಹಾಗೆಯೇ ಮಾತೃಶ್ರೀ ಅಮ್ಮನವರು ಇಡೀ ಕರ್ನಾಟಕದ ಮನೆಯನ್ನು ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಬೆಳಗಿದ್ದಾರೆ. ಮಹಿಳೆಯರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಮೂಡಿಸಿ, ಆತ್ಮಭಿಮಾನ ಹೆಚ್ಚಿಸಿ ಸ್ವ ಉದ್ಯೋಗಗಳಿಗೆ ಪ್ರೇರಣೆ ಕೊಟ್ಟು, ತನ್ನ ಕುಟುಂಬದ ಬಲವರ್ಧನೆ ಮಾಡಿ ಕತ್ತಲಿನಿಂದ ಬೆಳಕಿನಡೆಗೆ ತರುವ ಕಾರ್ಯವನ್ನು ಜ್ಞಾನವಿಕಾಸ ಕಾರ್ಯಕ್ರಮ ಮಾಡುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ಸುಳ್ಯಪದವಿನ ನಿವೃತ್ತ ಶಿಕ್ಷಕಿ ಪ್ರೇಮ ಕಲ್ಲುರಾಯರವರು ಮಾತನಾಡಿ, ನಮ್ಮ ಸಂಸ್ಕೃತಿ ಸಂಸ್ಕಾರಗಳ ವಿಚಾರಗಳನ್ನು ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸಿಕೊಡಬೇಕು ಸಂಸ್ಕೃತ ಸಂಸ್ಕಾರವನ್ನು ಕಲಿಯಲು ಜಾತಿ ಧರ್ಮದ ಅವಶ್ಯಕತೆ ಇರುವುದಿಲ್ಲ ಸಣ್ಣ ಸಣ್ಣ ವಿಚಾರಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರೆ ಅವರಲ್ಲಿಯೂ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸುತ್ತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ ರಾಮ ಮೇನಲ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಸದಸ್ಯರನ್ನು ಆರ್ಥಿಕವಾಗಿ ಅಲ್ಲದೆ ಸಾಮಾಜಿಕವಾಗಿ ಧಾರ್ಮಿಕವಾಗಿ ಸಬಲರನ್ನಾಗಿ ಮಾಡಿಸಿದೆ.ಮಹಿಳೆಯರಲ್ಲಿ ಧೈರ್ಯವನ್ನು ತಂದಿದೆ ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯೋಜನೆಯ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ವಲಯದ ಮೇಲ್ವಿಚಾರಕ ಹರೀಶ್ ಕುಲಾಲ್ರವರು ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕೇಂದ್ರದ ದಾಖಲಾತಿಯನ್ನು ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅರಿಯಡ್ಕ ವಲಯದ ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ, ಗ್ರಾಮ ಪಂಚಾಯತ್ ಸದಸ್ಯ ವೆಂಕಪ್ಪ ನಾಯ್ಕ ಮೇನಾಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ, ಸದಸ್ಯರಾದ ಹಮೀದ್, ಸೇವಾ ಪ್ರತಿನಿಧಿಗಳು,ಒಕ್ಕೂಟದ ಪದಾಧಿಕಾರಿಗಳು,ವಿಎಲ್ಇ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸುಂದರ್ ವಂದಿಸಿದರು.