ವಿಟ್ಲ: ಶ್ರೀ ಗುರು ಪೂರ್ಣಿಮಾ ಉತ್ಸವದ “ಗುರುವಂದನಾ” ಕಾರ್ಯಕ್ರಮದ ಅಂಗವಾಗಿ ವಿಟ್ಲ ಪಡ್ನೂರು ಶಕ್ತಿ ಕೇಂದ್ರದ 220ನೇ ಬೂತ್ ನಲ್ಲಿ ನಿವೃತ್ತ ಹಿರಿಯ ಶಿಕ್ಷಕಿ ಮೋಹಿನಿ ಜಗನ್ನಾಥ ಕೆ. ರವರಿಗೆ ಗುರುವಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಉಪಾಧ್ಯಕ್ಷರು, ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ , ಬಿಜೆಪಿ ಬಂಟ್ವಾಳ ಮಂಡಲದ ಉಪಾಧ್ಯಕ್ಷರಾದ ರೇಷ್ಮಾಶಂಕರಿ ಬಲಿಪಗುಳಿ, ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರವಿಂದ ರೈ, ವಿಟ್ಲ ಪಡ್ನೂರು ಶಕ್ತಿ ಕೇಂದ್ರದ ಪ್ರಮುಖರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ, ಉಪಾಧ್ಯಕ್ಷರಾದ ಪ್ರೇಮಲತಾ, ಪ್ರಮುಖರಾದ ಜಗನ್ನಾಥ ಕೆ, ಶಿವರಾಜ್ ಪೂರ್ಲಪ್ಪಾಡಿ,
ರಾಕೇಶ್ ಪಿ. ಮೊದಲಾದವರು ಉಪಸ್ಥಿತರಿದ್ದರು.