ಶೀತ, ಕೆಮ್ಮಿಗೆ ಶುಂಠಿ ಕಷಾಯ ಅದ್ಭುತ ಪರಿಹಾರ!

0

ಮಳೆಗಾಲದಲ್ಲಿ ಕಾಡುವ ಸಮಸ್ಯೆ ಎಂದರೆ ಅದು ಶೀತ, ಕೆಮ್ಮು. ಈ ಶೀತ, ಕೆಮ್ಮು ಕೆಲವೊಮ್ಮೆ ಬೀಡದೇ ಕಾಡಿ, ಯಾವ ಕೆಲಸವನ್ನು ಮಾಡಲು ಸಾಧ್ಯವಾಗದಂತೆ ಮಾಡುತ್ತದೆ. ಇಂತಹ ಸಮಸ್ಯೆಗಳನ್ನು ಮನೆಯಲ್ಲೇ ನೈಸರ್ಗಿಕವಾಗಿ ಥಟ್‌ ಅಂತಾ ಶಮನ ಮಾಡುವ ಅತಿ ಸುಲಭದ ಔಷಧ ಶುಂಠಿ ಕಷಾಯ.

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಶುಂಠಿ ಇದ್ದೇ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ರೂಢಿಮಾತು.

ಈ ಕಷಾಯವನ್ನು ಮಕ್ಕಳು, ವಯಸ್ಸಾದವರು ಎಲ್ಲರೂ ಮಾಡಿ ಕುಡಿಯಬಹುದು. ಇದು ಶೀತ, ಕೆಮ್ಮು, ನೆಗಡಿ, ಗಂಟಲು ಕೆರೆತಕ್ಕೆ ಹೇಳಿ ಮಾಡಿಸಿದ ಮನೆಮದ್ದಾಗಿದೆ.

ಬೇಕಾಗಿರುವ ಸಾಮಾಗ್ರಿಗಳು:
ಅರಶಿಣ ಪುಡಿ -1/2 ಟೀಸ್ಲೂನ್‌
ಶುಂಠಿ ಪುಡಿ – 1/2 ಟೀಸ್ಲೂನ್‌
ಹಸಿ ಶುಂಠಿ – 1/2 ಇಂಚು
ನಿಂಬೆ ರಸ – 1 ಚಮಚ
ಲವಂಗ – 2
ದಾಲ್ಚಿನ್ನಿ ಪುಡಿ – 1/2 ಟೀಸ್ಲೂನ್‌
ಜೇನು ತುಪ್ಪ – 1 ಚಮಚ

ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ 2 ಗ್ಲಾಸ್‌ ತೆಗೆದುಕೊಳ್ಳಬೇಕು. ಅದಕ್ಕೆ ಅರಶಿಣ ಪುಡಿ, ಶುಂಠಿ ಪುಡಿ, ಹಸಿ ಶುಂಠಿ, ಲವಂಗ ಹಾಗೂ ದಾಲ್ಚಿನ್ನಿ ಪುಡಿ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿಕೊಳ್ಳಬೇಕು. ಈ ಕಷಾಯವನ್ನು ಬಿಸಿ ಬಿಸಿಯಾಗಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಹೀಗೆ ಮಾಡುವುದರಿಂದ ಕೆಮ್ಮು, ಶೀತ, ನೆಗಡಿ ಹಾಗೂ ಗಂಟಲು ಕೆರೆತ ಸಂಪೂರ್ಣ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here