ಉಪ್ಪಿನಂಗಡಿ: ‘ಟೀಮ್ ಅಘೋರ’ ಉಬಾರ್ ಇದರ ವತಿಯಿಂದ ಮೊದಲನೇ ವರ್ಷದ ಪಿಲಿ ಪಜ್ಜ ಹಾಗೂ ಊದು ಪೂಜೆ ಕಾರ್ಯಕ್ರಮವು ಸೆ.27 ಮತ್ತು 28ರಂದು ನಡೆಯಲಿದ್ದು, ಇದರ ದಿನಾಂಕ ಅನಾವರಣ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಲ್ಲಿ ನಡೆಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ ದಿನಾಂಕ ಅನಾವರಣಗೊಳಿಸಿದರು. ಈ ಸಂದರ್ಭ ಟೀಮ್ ಅಘೋರದ ಗೌರವಾಧ್ಯಕ್ಷ ಸಂತೋಷ್ ನಟ್ಟಿಬೈಲು, ಅಧ್ಯಕ್ಷ ಬ್ರಿಜೇಶ್ ಎಂ.ಎನ್. ಹಾಗೂ ಸದಸ್ಯರಾದ ಸಚಿತ್ ಗೌಂಡತ್ತಿಗೆ, ಜಿತೇಶ್ ಶೆಟ್ಟಿ ಕಜೆಕ್ಕಾರು, ಕಾರ್ತಿಕ್ ಉಪ್ಪಿನಂಗಡಿ, ರಶ್ಮಿತ್ ಶೆಟ್ಟಿ, ಮುರಳೀ ಸುಭಾಶ್ನಗರ, ಧನುಶ್ ಅಂಡೆತ್ತಡ್ಕ, ಅವಿನಾಶ್, ಪ್ರಜ್ವಲ್ ಮತ್ತಿತರರು ಇದ್ದರು.