ಕಾಣಿಯೂರು: ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಕಾಣಿಯೂರು ಶಕ್ತಿ ಕೇಂದ್ರದ ಬಿಜೆಪಿ ಬೊಬ್ಬೆಕೇರಿ ಬೂತ್ ಸಂಖ್ಯೆ 81ರಲ್ಲಿ ಗುರುಪೂರ್ಣಿಮೆ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಸಂಜೀವ ಪೈಕ ಮತ್ತು ಲೀಲಾವತಿ ರೈ ಪೈಕ ಇವರಿಗೆ ಗುರು ವಂದನೆ ಮತ್ತು ಗೌರವಾರ್ಪಣೆ ಕಾರ್ಯಕ್ರಮವನ್ನು ಅವರ ನಿವಾಸದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ರಾದ ಅನಂತ್ ಕುಮಾರ್ ಬೈಲಂಗಡಿ, ಕಾರ್ಯದರ್ಶಿ ಯಶವಂತ. ಕೆ , ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಚಂದ್ರ ರೈ ಕುಮೇರು, ಬೂತ್ ಸಮಿತಿ ಸದಸ್ಯರಾದ ಭವಿಷ್ ಕರಿಮಜಲು, ರವಿಶಂಕರ್ ನಾವೂರು, ರಮೇಶ್ ಉಪ್ಪಡ್ಕ, ಸತ್ಯವತಿ ರೈ ಪೈಕ, ಸುಲಕ್ಷಣ, ರೈ ಪೈಕ ಮತ್ತಿತರರು ಉಪಸ್ಥಿತರಿದ್ದರು.