ಪುತ್ತೂರು: ತೋಕೂರಿನ ಡಾ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.9ರಂದು ನಡೆದ ‘ಸಂವೇದನಾ’ ಪ್ರಬಂಧ ಪ್ರಸ್ತುತಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರು ಉತ್ತಮ ಸಾಧನೆಗೈದಿರುವರು.

9ನೇ ತರಗತಿಯ ತುಷಾರ್ ಪಿ.ವಿ. ಮತ್ತು 8 ನೇ ತರಗತಿಯ ಸುಧೀಕ್ಷಾ ಎಸ್. ಭಟ್ ಇವರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ್ನು ಪ್ರತಿನಿಧಿಸಿದ್ದರು.
8ನೇ ತರಗತಿಯ ಸುಧೀಕ್ಷಾ ಎಸ್ ಭಟ್ (ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ಎಂ ಎಸ್ ದಂಪತಿ ಪುತ್ರಿ) ಮಿಯಾವಾಕಿ ಅರಣ್ಯ ವಿಧಾನದ ಅತ್ಯುತ್ತಮ ಪ್ರಸ್ತುತಿಗಾಗಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.