ಪುತ್ತೂರು: ಸ್ಕೂಟರ್ ವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಸವಾರೆ ಗಾಯಗೊಡ ಘಟನೆ ಜು.12 ರಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಪುತ್ತೂರು ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ನಡೆದಿದೆ.
ಸ್ಕೂಟರ್ ಸವಾರೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸಿಬ್ಬಂದಿ ತ್ರಿವೇಣಿ ಗಾಯಗೊಂಡವರು. ಅವರು ಬೆಳಗ್ಗೆ ಕಚೇರಿಗೆ ಆಕ್ಟಿವಾ ಹೋಂಡಾದಲ್ಲಿ ಬರುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾರೊಂದರ ಟಯರ್ ಬೈಪಾಸ್ ರಸ್ತೆ ಉರ್ಲಾಂಡಿ ತಿರುವಿನಲ್ಲಿ ಬ್ಲಾಸ್ಟ್ ಆಗಿ ಆಕ್ಟೀವಾಗೆ ಡಿಕ್ಕಿಯಾಗಿದೆ.
ಅಪಘಾತದಿಂದ ಆಕ್ಡಿವಾ ಸವಾರೆ ತ್ರಿವೇಣಿ ಅವರ ಕೈಗೆ ಗಾಯವಾಗಿದ್ದು, ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.