ಪುತ್ತೂರು: ಡಿಸೈನಿಂಗ್, ಬ್ರ್ಯಾಂಡಿಂಗ್ ಮತ್ತು ಪ್ರಿಂಟಿಂಗ್ ಗೆ ಹೆಸರಾದ ‘ಕ್ಯೂಬ್ ಕ್ರಿಯೇಟಿವ್ಸ್’ ನೂತನ ಕಚೇರಿಯು ಪುತ್ತೂರಿನ ಚೇತನ ಹಾಸ್ಪಿಟಲ್ ಬಳಿಯ ನಾಯಕ್ಸ್ ಕಾಂಪ್ಲೆಕ್ಸ್ ನಲ್ಲಿ ಜು.13ರಂದು ಶುಭಾರಂಭಗೊಂಡಿತು.

ಮಾಲಕ ಪ್ರದೀಪ್ ಅವರ ತಾಯಿ ಜಯಲಕ್ಷ್ಮೀ ಹಾಗೂ ಸಹೋದರ ಪ್ರಶಾಂತ್, ಮಮತಾ ಪ್ರಶಾಂತ್ ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಮಾಲಕ ಪ್ರದೀಪ್ ಮಾತನಾಡಿ, ಎಲ್ಲಾ ರೀತಿಯ ಸೋಶಿಯಲ್ ಮೀಡಿಯ ಪೋಸ್ಟರ್, ವಿಸಿಟಿಂಗ್ ಕಾರ್ಡ್, ಬ್ರೋಚರ್ಸ್, ಫ್ಲಕ್ಸ್ ಪ್ರಿಂಟಿಂಗ್ ಗಳು, LED boardಗಳು, ಕಸ್ಟಮೈಸ್ ಡ್ ಫೋಟೋ ಫ್ರೇಮ್ ಮತ್ತು ಗಿಫ್ಟ್ ಗಳು ಇಲ್ಲಿ ದೊರೆಯಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಸ್ನೇಹಿತರು, ಕುಟುಂಬಸ್ಥರು ಉಪಸ್ಥಿತರಿದ್ದು, ಶುಭ ಹಾರೈಸಿದರು.