ಕಾಣಿಯೂರು: ಕಾೖಮಣ ಗ್ರಾಮದ ಅಗಳಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವತಿಯಿಂದ ಆ.8ರಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ 7ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕ ಶ್ಯಾಮ್ ಭಟ್, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರೈ ಮಾದೋಡಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ, ಕಾರ್ಯದರ್ಶಿ ಕಾವ್ಯ ಅಗಳಿ, ಗೌರವಾಧ್ಯಕ್ಷೆ ತಾರಾ ಬೆಳಂದೂರು, ಸಂಧ್ಯಾ ಅಗಳಿ, ಪ್ರಮೀಳಾ ಮನ್ಮಥ, ಹರಿಣಿ, ಪದ್ಮಾವತಿ, ಮಾಧವಿ ಬೊಮ್ಮೊಡಿ, ನಾಗರತ್ನ, ಜಯಲಕ್ಷ್ಮೀ, ಪ್ರಣಮ್ಯ, ವೇಣುಗೋಪಾಲ ಕಳುವಾಜೆ, ಕುಶಾಲಪ್ಪ ಅಬೀರ ಮತ್ತಿತರರು ಉಪಸ್ಥಿತರಿದ್ದರು.