ಪುತ್ತೂರು: ಬಪ್ಪಳಿಗೆ-ಪುತ್ತೂರು ಇಲ್ಲಿರುವ ಕಾರ್ಯಾಚರಿಸುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಹಾಗೂ ಕಡಬ ತಾಲೂಕು ಒಳಗೊಂಡ 55 ಗ್ರಾಮ ಸಮಿತಿಯ ಪುತ್ತೂರು ತಾಲೂಕು ಬಿಲ್ಲವ ಮಹಿಳಾ ವೇದಿಕೆಯ 2024-25ನೇ ಸಾಲಿನ ಮಹಾಸಭೆ ಹಾಗೂ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬಿಲ್ಲವ ಸಂಘದ ಸಭಾಂಗಣದಲ್ಲಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರ ಅಧ್ಯಕ್ಷತೆಯಲ್ಲಿ ಜರುಗಿತು.
ಅಧ್ಯಕ್ಷೆಯಾಗಿ ಪುಷ್ಪಲತಾ ಬಿ.ಎನ್ ಕೇಕುಡ ಸವಣೂರು, ಕಾರ್ಯದರ್ಶಿಯಾಗಿ ಗೀತಾ ರಮೇಶ್ ಅಂಚನ್ ಮುಂಡೂರು, ಉಪಾಧ್ಯಕ್ಷರುಗಳಾಗಿ ಶಕುಂತಲಾ ಬೆಟ್ಟಂಪಾಡಿ ಹಾಗೂ ಇಂದಿರಾ(ಶ್ವೇತ) ಕೋಡಿಂಬಾಳ, ಜೊತೆ ಕಾರ್ಯದರ್ಶಿಯಾಗಿ ಪ್ರೀತಿಕಾ ಪುತ್ತೂರು, ಕೋಶಾಧಿಕಾರಿಯಾಗಿ ಪ್ರೇಮಲತಾ ದೇವದಾಸ್ ಡೆಕ್ಕಾಜೆ ಕೋಡಿಂಬಾಡಿರವರು ಆಯ್ಕೆಯಾಗಿದ್ದಾರೆ.
ಸಮಿತಿಯಲ್ಲಿ 55 ಗ್ರಾಮ ಸಮಿತಿಯ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪುತ್ತೂರು ವಲಯದಿಂದ ಪ್ರೀತಿಕಾ(ಪುತ್ತೂರು ಕಸಬಾ), ದೇವಿಕಾ ಬನ್ನೂರು(ಬನ್ನೂರು), ಸುಜಾತ ತಾರಿಗುಡ್ಡೆ(ಕೇಪುಳು-ಬೆದ್ರಾಳ), ಬಲ್ನಾಡು ವಲಯದಿಂದ ಶಕುಂತಲಾ(ಬಲ್ನಾಡು), ಸೌಮ್ಯ ಸಾಜ(ಬುಳೇರಿಕಟ್ಟೆ), ನಮಿತಾ(ಕೊಡಿಪಾಡಿ), ದೀಪಿಕಾ(ಕೆಮ್ಮಿಂಜೆ), ಪುತ್ತೂರು ಗ್ರಾಮಾಂತರದಿಂದ ಸವಿತಾ ನೆಲಪ್ಪಾಲ್(ಪಡ್ನೂರು), ಗೀತಾ ಅನಂತಿಮಾರ್(ಚಿಕ್ಕಮುಡ್ನೂರು), ಉಷಾ(ಬೆಳ್ಳಿಪ್ಪಾಡಿ), ಪ್ರೇಮಲತಾ(ಕೋಡಿಂಬಾಡಿ), ಪ್ರಿಯಾಂಕಾ(ಕಬಕ), ಉಪ್ಪಿನಂಗಡಿ ವಲಯದಿಂದ ಸುಕನ್ಯ(ಉಪ್ಪಿನಂಗಡಿ), ವಿದ್ಯಾ ನಿಡ್ಡೆಂಕಿ(ಹಿರೇಬಂಡಾಡಿ), ಮಮತಾ(ಬಜತ್ತೂರು), ನೆಲ್ಯಾಡಿ ವಲಯದಿಂದ ಶಾಲಿನಿ ಶೇಖರ ಪೂಜಾರಿ(ಗೋಳಿತೊಟ್ಟು-ಆಲಂತಾಯ), ಜಯಶ್ರೀ(ಶಿರಾಡಿ-ಕೊಣಾಜೆ-ಸಿರಿಬಾಗಿಲು), ನಳಿನಿ(ಇಚ್ಲಂಪಾಡಿ), ದೀಕ್ಷಾ ಚಂದನ್(ನೆಲ್ಯಾಡಿ-ಕೌಕ್ರಾಡಿ-ಕೊಣಾಲು), ಆರ್ಯಾಪು ವಲಯದಿಂದ ಸವಿತಾ ಆನಂದ್(ಆರ್ಯಾಪು), ರಮ್ಯ(ಕುರಿಯ), ಪ್ರಮೀಳಾ(ಕುಂಜೂರುಪಂಜ), ಶಕುಂತಲಾ(ಇರ್ದೆ ಬೆಟ್ಟಂಪಾಡಿ), ರಾಧ(ಪಾಣಾಜೆ), ಸುಮತಿ ಚೂರಿಪದವು(ನಿಡ್ಪಳ್ಳಿ), ಕುಂಬ್ರ ವಲಯದಿಂದ ತ್ರಿವೇಣಿ ಪಲ್ಲತ್ತಾರು(ಒಳಮೊಗ್ರು), ಸುಮಿತ್ರಾ ದಿವಾಕರ ಪೂಜಾರಿ(ಕೆಯ್ಯೂರು), ಹೇಮಲತಾ ಕೊಟ್ಟಿಯಡ್ಕ(ಕೆದಂಬಾಡಿ), ಶೇಷಮ್ಮ ಗುಂಡ್ಯಡ್ಕ(ಅರಿಯಡ್ಕ), ಯಶೋಧ ಹಸಂತ್ತಡ್ಕ(ಪಾಲ್ತಾಡಿ), ಬಡಗನ್ನೂರು ವಲಯದಿಂದ ವಿನಯಕುಮಾರಿ(ಸುಳ್ಯಪದವು-ಪಡುವನ್ನೂರು), ರೋಹಿಣಿ ಶಿವರಾಮ(ನೆಟ್ಟಣಿಗೆ ಮುಡ್ನೂರು), ಶಶಿಕಲಾ ಸೀಮುಂಜ(ಕಾವು), ನರಿಮೊಗರು ವಲಯದಿಂದ ನಮಿತಾ ಇಂದಿರಾನಗರ(ನರಿಮೊಗರು), ಗಾಯತ್ರಿ(ಆನಡ್ಕ), ಅಮಿತಾ ಸುದರ್ಶನ್(ಶಾಂತಿಗೋಡು), ಯಶೋಧ(ಸರ್ವೆ), ಗೀತಾ ರಮೇಶ್ (ಮುಂಡೂರು), ಸವಣೂರು ವಲಯದಿಂದ ವನಿತಾ ಕುಂಬ್ಲಾಡಿ(ಕಾಣಿಯೂರು-ಚಾರ್ವಾಕ-ದೋಲ್ಪಾಡಿ), ತೇಜಾಕ್ಷಿ ಕೊಡಂಗೆ(ಕುದ್ಮಾರು-ಬೆಳಂದೂರು-ಕಾಯಿಮಣ), ಪುಷ್ಪಾವತಿ(ಸವಣೂರು-ಪುಣ್ಚಪ್ಪಾಡಿ), ಆಲಂಕಾರು ವಲಯದಿಂದ ಮಲ್ಲಿಕಾ ಕಲ್ಲೇರಿ(ಆಲಂಕಾರು), ಸುಚೇತ ಬರೆಂಬೆಟ್ಟು(ಹಳೇನೇರಂಕಿ), ವಸಂತಿ(ರಾಮಕುಂಜ-ಕೊಯಿಲ), ಉಷಾ ರವಿ ಮಾಯಿಲ್ಗ(ಪೆರಾಬೆ-ಕುಂತೂರು), ಕಡಬ ವಲಯದಿಂದ ಗೀತಾ ದಿನೇಶ್ ಮತ್ರಾಡಿ(ಬಲ್ಯ), ಹರಿಣಿ ಪಿಜಕ್ಕಳ(ಕಡಬ-ಕುಟ್ರುಪ್ಪಾಡಿ), ಶ್ವೇತ ಕುದುಂಬೂರು(ಕೋಡಿಂಬಾಳ), ಮರ್ದಾಳ ವಲಯದಿಂದ ಪುಷ್ಪಾ ಎನ್(ರೆಂಜಿಲಾಡಿ), ನಯನಾ ಮರ್ದಾಳ(ಐತೂರು, ಬಂಟ್ರ, 102 ನೆಕ್ಕಿಲಾಡಿ), ಜಯ ಕೊಂಬಾರುಗದ್ದೆ(ಕೊಂಬಾರು-ಬಿಳಿನೆಲೆ)ರವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ತಾಲೂಕು ಬಿಲ್ಲವ ಮಹಿಳಾ ವೇದಿಕೆ ಸಂಚಾಲಕಿ ಉಷಾ ಅಂಚನ್, ನಿಕಟಪೂರ್ವ ಅಧ್ಯಕ್ಷೆ ವಿಮಲಾ ಸುರೇಶ್, ಕಾರ್ಯದರ್ಶಿ ಸುಶ್ಮಾ ಸತೀಶ್, ಜೊತೆ ಕಾರ್ಯದರ್ಶಿ ಆಶಾ ಶಾಂತಿಗೋಡು, ಉಪಾಧ್ಯಕ್ಷೆ ವಿದ್ಯಾ ನಿಡ್ಡೆಂಕಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಸಹಿತ ಹಲವರು ಉಪಸ್ಥಿತರಿದ್ದರು. ವಿದ್ಯಾ ಪ್ರಾರ್ಥಿಸಿದರು. ಮಹಾಸಭೆಯಲ್ಲಿ ಹಿಂದಿನ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದಿಸಲಾಯಿತು.