ಇಂದಿನ ಕಾರ್ಯಕ್ರಮ (14-07-2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ೫೯ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ರಚನೆ ಮುಹೂರ್ತ, ಚಪ್ಪರ ಮುಹೂರ್ತ
ಪುತ್ತೂರು ಬಿಜೆಪಿಯಿಂದ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ದ ಬೆಳಿಗ್ಗೆ ನೆಲ್ಲಿಕಟ್ಟೆ ಬಸ್ ನಿಲ್ದಾಣದ ಬಳಿಯಿಂದ ಕಿಲ್ಲೆ ಮೈದಾನದ ಆವರಣ ಅಮರ್ ಜವಾನ್ ಸ್ಮಾರಕದ ತನಕ ಪಾದಯಾತ್ರೆ, ಪ್ರತಿಭಟನೆ
ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬೆಳಿಗ್ಗೆ ೧೦ಕ್ಕೆ ವಾರ್ಷಿಕ ಸಾಮಾನ್ಯ ಸಭೆ
ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಶಾಲಾ ನೂತನ ಕಟ್ಟಡದ ಉದ್ಘಾಟನೆ
ಕೋಡಿಂಬಾಡಿ ಚತುರ್ಥಿ ರಂಗಮಂದಿರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕೋಡಿಂಬಾಡಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಇಡಬೆಟ್ಟು ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುರಿಯ ೧ನೇ ವಾರ್ಡ್, ಕುರಿಯ ಮಾವಿನಕಟ್ಟೆ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ೧೧.೩೦ಕ್ಕೆ ೨ನೇ ವಾರ್ಡ್, ಕಂಬಳದಡ್ಡ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೨ಕ್ಕೆ ಆರ್ಯಾಪು ೩ನೇ ವಾರ್ಡ್, ಹಂಟ್ಯಾರು ಹಿ.ಪ್ರಾ. ಶಾಲೆಯಲ್ಲಿ ೪ಕ್ಕೆ ೪ನೇ ವಾರ್ಡ್‌ನ ವಾರ್ಡುಸಭೆ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಶ್ರೀ ಲಕ್ಷ್ಮೀಪೂಜೆ, ಮಹಾಪೂಜೆ
ಶುಭಾರಂಭ
ಬೊಳುವಾರು ಮುಖ್ಯರಸ್ತೆ, ವಗಾ ಸೆಂಟರ್ ಬಳಿ ಬೆಳಿಗ್ಗೆ “ಜನ್‌ಮನ್ ಜೆನರಿಕ್ ಔಷಧಿ ಶುಭಾರಂಭ
ದರ್ಬೆ ಆರಾಧ್ಯ ಆರ್ಕೇಡ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಬ್ರೈಡಲ್ ಮೇಕಪ್ ಸ್ಟುಡಿಯೋ “ಗ್ಲೋ ಅಪ್ ಬೈ ಮಾನಸ” ಶುಭಾರಂಭ
ಸರ್ವೆ ಭಕ್ತಕೋಡಿಯಲ್ಲಿ ಬೆಳಿಗ್ಗೆ ೧೧.೦೪ಕ್ಕೆ ವರಾಹ ಮೆಡಿಕಲ್ & ಸ್ಪೆಷಾಲಿಟಿ ಕ್ಲಿನಿಕ್ ಶುಭಾರಂಭ
ಗೃಹಪ್ರವೇಶೋತ್ಸವ
ಕೆದಂಬಾಡಿ ಗ್ರಾಮದ ಮಿತ್ರಂಪಾಡಿಯಲ್ಲಿ ಮನವಳಿಕೆ ಗುತ್ತು ನಳಿನಿ ಕರಿಯಪ್ಪ ರೈಯವರ ನೂತನ ಮನೆ “ನಂದನ ನಿಲಯ”ದ ಗೃಹಪ್ರವೇಶೋತ್ಸವ

LEAVE A REPLY

Please enter your comment!
Please enter your name here