ಪುತ್ತೂರು : ಪುತ್ತೂರು-ಮಂಗಳೂರು ಎಕ್ಸ್ ಪ್ರೆಸ್ ಬಸ್ ಪುತ್ತೂರಿನಲ್ಲಿ ಪ್ರಥಮವಾಗಿ ಜನರ ಬೇಡಿಕೆ ಪ್ರಕಾರ ಆರಂಭಿಸಿದ್ದೇವೆ. ಈ ವ್ಯವಸ್ಥೆ ಎಲ್ಲೂ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೆ.ಎಸ್.ಆರ್.ಟಿ.ಸಿಯಿಂದ ಪುತ್ತೂರು-ಮಂಗಳೂರು ಸ್ಟೇಟ್ ಬ್ಯಾಂಕ್ ತಡೆ ರಹಿತ ಬಸ್ ಅನ್ನು ಜು.14 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಮಾತನಾಡಿದರು.

ಬೇಡಿಕೆ ಪ್ರಕಾರ ಪುತ್ತೂರು ಮಂಗಳೂರು ಎಕ್ಸ್ ಪ್ರೆಸ್ ಬಸ್ ಆರಂಭ ಮಾಡಿದ್ದೇವೆ. ಪ್ರತಿ 20 ನಿಮಿಷಕ್ಕೆ ಬಸ್ ಪುತ್ತೂರು ಮತ್ತು ಮಂಗಳೂರಿನಿಂದ ಹೊರಡಲಿದೆ. ಇದಕ್ಕೆ ಎಲ್ಲಿಯೂ ನಿಲುಗಡೆ ಇಲ್ಲ. 45 ನಿಮಿಷದಿಂದ 1 ಗಂಟೆಯೊಳಗೆ ಮಂಗಳೂರಿಗೆ ತಲುಪಬಹುದು. ದಿನಕ್ಕೆ 60 ರಿಂದ 70 ಟ್ರಿಪ್ ಓಡಾಟ ಮಾಡಲಿದೆ. ಇದು ಪುತ್ತೂರಿನ ಉದ್ಯಮ ಬೆಳವಣಿಗೆಗೆ ಪೂರಕ. ಎಲ್ಲಾ ಸಾರ್ವಜನಿಕರು ಇದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಿ. ಬೆಳಗ್ಗೆ 8 ಗಂಟೆಯಿಂದ ರಾತ್ರಿ ಗಂ 9 ರ ತನಕ ಓಡಾಟ ಮಾಡುವ ಈ ಬಸ್ ಪುತ್ತೂರಿನಲ್ಲಿ ಮೊತ್ತ ಮೊದಲಿಗೆ ಆರಂಭಗೊಂಡಿದೆ. ಬೇರೆಲ್ಲೂ ಈ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಈ ಬಸ್ ನಲ್ಲಿ ಉಚಿತ ಪ್ರಯಾಣವಿದೆ. ಕಾಂಗ್ರೆಸ್ ಸರಕಾರ ಇಲ್ಲಿನ ತನಕ ಸುಮಾರು 5 ಕೋಟಿ ಜನ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದೆ ಎಂದರು.
ಈ ಸಂದರ್ಭ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ತಕ್ಷ ಕೃಷ್ಣಪ್ರಸಾದ್ ಆಳ್ವ, ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಡಿಪೊ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.