ಪುತ್ತೂರು: ಮುಂಡೂರು ಅಜ್ಜಿಕಟ್ಟೆ ಮದ್ರಸದಲ್ಲಿ ಮೊಹಲ್ಲಿಂ ಡೇ. (ಟೀಚರ್ಸ್ ಡೇ) ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರು ಮತ್ತು ಜಮಾತಿನ ಹಿರಿಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರೇಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷರು ಹಾಗೂ ಜಿಲ್ಲಾ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಅಬುಬಕ್ಕರ್ ಮಲಾರ್ ವಹಿಸಿದ್ದರು.
ಮುಖ್ಯ ಪ್ರಭಾಷಣವನ್ನು ಜ.ಖತೀಬರಾದ ಇಸಾಕ್ ದಾರಿಮಿ ಮದ್ರಸ ಮತ್ತು ಧಾರ್ಮಿಕ ಶಿಕ್ಷಣದ ಅಗತ್ಯತೆ ಅದರ ಪವಿತ್ರತೆ ಬಗ್ಗೆ ವಿವರಿಸಿದರು.
ಸದರ್ ಉಸ್ತಾದ್ ಅಬ್ದುಲ್ ಖಾದರ್ ಮುಸ್ಲಿಯಾರ್ ಮಕ್ಕಳು ಧಾರ್ಮಿಕತೆಯ ವಿದ್ಯಾಭ್ಯಾಸಗಳಿಂದ ವಂಚಿರಾದರೆ ಅವರಿಗೆ ಸಹಬಾಳ್ವೆ ಸಂಸ್ಕಾರ ಇನ್ನೊಬ್ಬರ ಬಗ್ಗೆ ನೀಡಬೇಕಾದ ಗೌರವ ಮತ್ತು ಕರುಣೆ ಎಲ್ಲವೂ ಮರೆಮಾಚಿದಂತಾಗುತ್ತದೆ ಎಂದು ಹಿತವಚನ ನೀಡಿದರು.
ಜಮಾತಿನ ಪೋಷಕ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್ ಅಜ್ಜಿಕಟ್ಟೆ ಶಾಖೆ ವತಿಯಿಂದ ಅಧ್ಯಾಪಕರುಗಳಿಗೆ ಗಿಫ್ಟ್ ನೀಡಿ ಅಭಿನಂದಿಸಿದರು. ಮೋಹಝಿನ್ ಖಾಲಿದ್ ಮುಸ್ಲಿಯಾರ್ ಧನ್ಯವಾದ
ಸಮರ್ಪಿಸಿದರು. ವೇದಿಕೆಯಲ್ಲಿ ಜಮಾತಿನ ಆಡಳಿತ ಸಮಿತಿಯ ಪದಾಧಿಕಾರಿಗಳು, ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳು ಜಮಾತ್ ಸದಸ್ಯರು, ಮಕ್ಕಳ ಪೋಷಕರು ಪಾಲ್ಗೊಂಡಿದ್ದರು