ಬ್ರ್ಯಾಂಡ್ ಹೆಸರಿನ ಔಷಧಿಗಳಿಗಿಂತ ಕಡಿಮೆ ಬೆಲೆಯ ಔಷಧಿಗಳು- ಪುತ್ತೂರಿನಲ್ಲಿ ಜನ್‌ಮನ್ ಜನರಿಕ್ ಔಷಧಿಯ ಎರಡು ಪ್ರಾಂಚೈಸಿ ಶುಭಾರಂಭ

0

3೦೦೦ + ಔಷಧಿಗಳು,
3೦೦ + ಶಸ್ತ್ರಚಿಕಿತ್ಸಾ ಸಲಕರಣೆಗಳು
250೦ + ಪಶು ಔಷಧಿಗಳು, ಆನ್‌ಲೈನ್ ಮೂಲಕವೂ ಔಷಧಿ ಖರೀದಿಸುವ ಅವಕಾಶ

ಪುತ್ತೂರು: ದೇಶದಲ್ಲಿ ಯುವಕರಿಗೆ ಸದೃಢವಾದ ವ್ಯವಹಾರವನ್ನು ಕಟ್ಟಿಕೊಡುವ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಜನ್‌ಮನ್ ಜೆನರಿಕ್ ಔಷಧಿ. ಬ್ರ್ಯಾಂಡ್ ಹೆಸರಿನ ಔಷಧಿಗಳಿಗಿಂತ ಕಡಿಮೆ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಯನ್ನು ನೀಡುವ ಉದ್ದೇಶದಿಂದ ದೇಶದಾದ್ಯಂತ “ಜನ್‌ಮನ್ ಜನರಿಕ್ ಔಷಧಿ” ಪ್ರಾಂಚೈಸಿ ಗಳನ್ನು ತೆರೆಯಲಾಗುತ್ತಿದ್ದು, ಪುತ್ತೂರಿನಲ್ಲಿ ಎರಡು ಪ್ರಾಂಚೈಸಿಗಳು ಜು.14ರಂದು ಉದ್ಘಾಟನೆಗೊಂಡಿತು.


ಬೊಳುವಾರಿನಲ್ಲಿ ಪ್ರಾಂಚೈಸಿ ಉದ್ಘಾಟನೆ:
ಮುಖ್ಯರಸ್ತೆ ಬೊಳುವಾರಿನಲ್ಲಿರುವ ಮೇಗಾ ಸೆಂಟರ್‌ನಲ್ಲಿ ಆಸ್ಕರ್ ಆನಂದ್ ಅವರ ಮಾಲಕತ್ವದಲ್ಲಿ “ಜನ್ ಮನ್ ಜನರಿಕ್ ಔಷಧಿ”ಯ ಹೊಸ ಪ್ರಾಂಚೈಸಿ ಅನ್ನು ಉಷಾ ಶ್ರೀಧರ ಭಂಡಾರಿ ಮತ್ತು ಕಟ್ಟಡದ ಮಾಲಕ ಸೆನೋರಿಟಾ ಹಾಗು ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರು ಉದ್ಘಾಟಿಸಿದರು.

ಈ ಸಂದರ್ಭ ಜನ್‌ಮನ್ ಜನರಿಕ್ ಔಷಧಿಯ ಜಿಲ್ಲಾ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಡಾ. ಜೈದೀಪ್, ಮಧುನರಿಯೂರು, ದುಬೈ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಹನೀಫ್ ಪುತ್ತೂರು, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ, ಡಾ| ಪೀಟರ್‌ವಿಲ್ಸನ್ ಪ್ರಭಾಕರ್, ಜಯಂತ ನಡುಬೈಲು, ಹೆರಾಲ್ಡ್ ಮಾರ್ತ, ಡಾ. ಕೀರ್ತನ್ ಕಜೆ, ಸುಶಾಂತ್ ಹಾರ್ವಿನ್, ಪ್ರಗತಿ ಪ್ಯಾರ ಮೆಡಿಕಲ್ ಪ್ರೀತಾ ಎ, ಉಮಾನಾಥ ಪಿ.ಬಿ. ಭುಜಂಗ ಆಚಾರ್ಯ, ಡಾ| ಹರ್ಷ ಕುಮಾರ್ ರೈ ಮಾಡಾವು, ಎ ಜಗಜೀವನ್‌ದಾಸ್ ರೈ, ಸುರೇಶ್ ಶೆಟ್ಟಿ, ಜೈರಾಜ್ ಭಂಡಾರಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಕೋರ್ಟ್‌ರಸ್ತೆಯಲ್ಲಿ ಉಪಫ್ಯಾಂಚೈಸಿ ಉದ್ಘಾಟನೆ:
ಕೋರ್ಟು ರಸ್ತೆಯಲ್ಲಿರುವ ಸತ್ಯಸಾಯಿ ಮೆಡಿಕಲ್‌ನಲ್ಲಿ ಕಿಶೋರ್ ಕುಮಾರ್ ಅವರ ಮಾಲಕತ್ವದಲ್ಲಿ ಉಪ ಫ್ರ್ಯಾಂಚೈಸಿಯನ್ನು ಸತ್ಯಸಾಯಿ ಆಸ್ಪತ್ರೆಯ ಡಾ. ಸತ್ಯಸುಂದರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಡಾ. ಅನುರಾಧ ಎಸ್ ರಾವ್, ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ, ಪಡೀಲ್ ಮನೋರಮ ಮೆಡಿಕಲ್ ಮಾಲಕ ಕಿಶನ್ ಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಜನ್‌ಮನ್ ಜನರಿಕ್ ಔಷದಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ಡಾ. ಅನಿಲ ದೀಪಕ್ ಶೆಟ್ಟಿ, ದೀಪಕ್ ಶೆಟ್ಟಿ, ಆಸ್ಕರ್ ಆನಂದ್, ಕಿಶೋರ್ ಕುಮಾರ್ ಹಾಗು ಜನಮನ್ ಜನರಿಕ್ ಸಂಸ್ಥೆಯ ದ.ಕ.ಜಿಲ್ಲಾ ಎಲ್ಲಾ ಪ್ರಾಂಚೈಸಿಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಅತ್ಯಂತ ಕಡಿಮೆ ಬೆಲೆಯ ಔಷಧಿಗಳು:
ಜನ್ಮಾನ್ ಜನೆರಿಕ್ ಔಷಧಿಯ ಮುಖ್ಯ ಕಾರ್ಯನಿರ್ವಾಹಕಿ ಡಾ. ಅನಿಲ ದೀಪಕ್ ಶೆಟ್ಟಿಯವರು ಮಾತನಾಡಿ ಉತ್ಕೃಷ್ಟ ಗುಣಮಟ್ಟದ ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವುದು ಇದರ ಎರಡನೇ ಉದ್ದೇಶವಾಗಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಮಾಡಿಕೊಳ್ಳದೆ ಇಲ್ಲಿ ದೊರೆಯುವ ಶೇ.75 ಔಷಧಿಗಳಿಗೆ ಶೇ.50 ಕಡಿಮೆ ಬೆಲೆಯನ್ನು ನಿರ್ಧರಿಸಿದೆ. “ಜನ್‌ಮನ್ ಜನರಿಕ್ ಔಷಧಿ” ಕೇಂದ್ರದ ಮಾಲಕರ ದೃಢವಾದ ವ್ಯವಹಾರದ ಮೂಲಕ, ಆರ್ಥಿಕ ಸ್ಥಿರತೆ ಹಾಗೂ ಗುಣಮಟ್ಟದ ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವ ಮೂಲಕ ಜನಸಾಮಾನ್ಯರಿಗೆ ಸಹಕಾರ ನೀಡುವುದರ ಜೊತೆಗೆ ಆರೋಗ್ಯವಂತ ಮನಸ್ಸು, ಕುಟುಂಬ, ಸಮಾಜದ ನಿರ್ಮಾಣದೊಂದಿಗೆ ದೇಶದ ಅಭಿವೃದ್ಧಿಗೆ ಬೃಹತ್ ಪ್ರಮಾಣದಲ್ಲಿ ಕೊಡುಗೆ ನೀಡುವ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವಂತಹ ಸಂಸ್ಥೆ. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದಲ್ಲಿ ಜನ್ ಮನ್ ಜನರಿಕ್ ಔಷಧಿಯ ಫ್ರ್ಯಾಂಚೈಸ್ ಗಳು ಅತ್ಯಂತ ವೇಗದಲ್ಲಿ ತೆರೆಯುತ್ತಿದ್ದು, ಪ್ರತಿ ಕಿ.ಮೀ ಗೆ ಒಂದರಂತೆ ಹೊಸ ಪ್ರಾಂಚೈಸಿ ಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ 3000+ ಔಷಧಿಗಳು, 300 + ಶಸ್ತ್ರಚಿಕಿತ್ಸಾ ಸಲಕರಣೆಗಳು, 250+ ಪಶು ಔಷಧಿಗಳು, ಆನ್ಲೈನ್ ಮೂಲಕ ಔಷಧಿ ಖರೀದಿಸುವ ಅವಕಾಶವಿದೆ ಎಂದು ಅವರು ಹೇಳಿದರು.


ಬಡವರಿಗೆ ಪ್ರಯೋಜವಾಗಲಿ:
ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರು ಮಾತನಾಡಿ ಅತಿ ಕಡಿಮೆ ದರದಲ್ಲಿ ಸಿಗುವ ಔಷಧಿಗಳು ಮಾತ್ರವಲ್ಲ ಶಸ್ತ್ರಚಿಕಿತ್ಸಾ ಸಲಕರಣೆ ಸಿಗುವುದು ಬಹಳ ಮುಖ್ಯ. ಇವತ್ತಿನ ಕಾಲದಲ್ಲಿ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಇಂತಹ ಸೌಲಭ್ಯ ಬಹಳಷ್ಟು ಅಗತ್ಯವಿದೆ. ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.


ಎಲ್ಲಾ ಮೆಡಿಸಿನ್ ಸಿಗಲಿದೆ:
ಸತ್ಯ ಸಾಯಿ ಮೆಡಿಕಲ್‌ನಲ್ಲಿರುವ ಉಪಪ್ರಾಂಚೈಸಿಯನ್ನು ಉದ್ಘಾಟಿಸಿದ ಸತ್ಯ ಸಾಯಿ ಆಸ್ಪತ್ರೆಯ ಡಾ. ಸತ್ಯಸುಂದರ ರಾವ್ ಅವರು ಮಾತನಾಡಿ ಇವತ್ತಿನ ಸಂಕಷ್ಟ ಚತುರ್ಥಿಯ ದಿನಂದು ಉದ್ಘಾಟನೆಗೊಳ್ಳುತ್ತಿರುವ ಜನ್‌ಮನ್ ಜನರಿಕ್ ಔಷದಿಯ ಮಳಿಗೆಯಲ್ಲಿ ಎಲ್ಲಾ ಮೆಡಿಸಿನ್ ಲಭ್ಯವಿದೆ. ಇದು ಎಲ್ಲರ ಆರೋಗ್ಯ ಕಾಪಾಡಲಿ ಎಂದರು.


ಔಷಧಿ ಅಂಗಡಿ ತೆರೆಯಲು ಸಹಕಾರ
ಜನ್‌ಮನ್ ಜನರಿಕ್ ಫ್ರ್ಯಾಂಚೈಸ್‌ಯಲ್ಲಿ ಆಸಕ್ತಿಯುಳ್ಳ ಯಾವುದೇ ಗ್ರಾಹಕರಿಗೆ ಔಷಧಿ ಅಂಗಡಿಗಳನ್ನು ತೆರೆಯಲು ಸಂಪೂರ್ಣವಾದ ಸಹಕಾರವನ್ನು ನೀಡಲಾಗುತ್ತದೆ. ಸ್ಥಳದ ಆಯ್ಕೆ, ಸಿಬ್ಬಂದಿಗಳ ಆಯ್ಕೆ, ಫಾರ್ಮಾಸಿಟಿಕಲ್ ಆಯ್ಕೆ, ಅಂಗಡಿ ಒಳಾಂಗಣ ವಿನ್ಯಾಸ, ಅಂಗಡಿ ಬ್ರ್ಯಾಂಡಿಂಗ್, ಔಷಧಿ ಪರವಾನಗಿ ಪಡೆಯಲು ಸಹಕಾರ, ಸಿಬ್ಬಂದಿಗಳ ತರಬೇತಿ, ಸಾಫ್ಟ್ವೇರ್ ಅಳವಡಿಕೆ, ವ್ಯವಹಾರದ ಬೆಳವಣಿಗೆಗೆ ಬೇಕಾದ ಮಾರುಕಟ್ಟೆ ಬೆಳವಣಿಗೆ ಹೀಗೆ ಸಂಪೂರ್ಣ ಸಹಕಾರವನ್ನು ನೀಡಿ ವ್ಯವಹಾರದ ಯಶಸ್ಸಿನ ಸಂಪೂರ್ಣ ಜವಾಬ್ದಾರಿಯನ್ನು ಔಷಧಿ ಅಂಗಡಿಯ ಮಾಲಕನೊಂದಿಗೆ ಜನ್‌ಮನ್ ಸಂಸ್ಥೆಯು ತೆಗೆದುಕೊಳ್ಳುತ್ತದೆ. ಔಷಧಿ ಕೇಂದ್ರಗಳನ್ನು ಸ್ಥಾಪಿಸುವ ಮೊದಲು ಸಂಪೂರ್ಣ ಮಾರುಕಟ್ಟೆಯ ಅಧ್ಯಯನವನ್ನು ನಡೆಸಿ, ವ್ಯವಹಾರದ ಯಶಸ್ಸು ಖಚಿತಗೊಂಡ ನಂತರವೇ ಹೊಸ ಫ್ರ್ಯಾಂಚೈಸ್ ಗಳಿಗೆ ಅನುಮೋದನೆಯನ್ನು ನೀಡಲಾಗುತ್ತದೆ. ಜನ್ ಮನ್ ಜನರಿಕ್ ಔಷಧಿಯ ಫ್ರ್ಯಾಂಚೈಸ್ ಗಳನ್ನು ಎರಡು ರೀತಿಯಲ್ಲಿ ತೆರೆಯಲಾಗುತ್ತಿದೆ. ಹೊಸ ಫ್ರಾಂಚೈಸಿಯನ್ನು ಪ್ರಾರಂಭಿಸಬಹುದು ಅಥವಾ ಬೇರೆ ಔಷಧಿ ಅಂಗಡಿಗಳಿಗೆ ಉಪ- ಫ್ರ್ಯಾಂಚೈಸಿಯಾಗಿ ತೆರೆಯಬಹುದು ಆದರೆ ಅಂಗಡಿಯ ಹೆಸರು “ಜನ್ ಮನ್ ಜನರಿಕ್ ಔಷಧಿ” ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಈ ಸಂಸ್ಥೆಯ ಹೆಚ್ಚಿನ ವಿವರವನ್ನು www.janmanpharma.in ವೆಬ್ಸೈಟ್ ಮೂಲಕ ಪಡೆಯಬಹುದು
ಡಾ. ಅನಿಲ ದೀಪಕ್ ಶೆಟ್ಟಿ
ಮುಖ್ಯ ಕಾರ್ಯನಿರ್ವಾಹಕರು, ಜನ್‌ಮನ್ ಜೆನೆರಿಕ್ ಔಷಧಿ
(ಸಸ್ಪಿಂಜಿರಾ ಫಾರ್ಮಸೂಟಿಕಲ್ಸ್ ಪ್ರೈ. ಲಿ. ಯ ಘಟಕ)

LEAVE A REPLY

Please enter your comment!
Please enter your name here