ನಿಡ್ಪಳ್ಳಿ: ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಂದೆ ಕ್ಯಾಶ್ ಲೆಸ್ ವ್ಯವಹಾರವನ್ನು ಜಾರಿಗೊಳಿಸುವ ಉದ್ದೇಶದಿಂದ ಸಂಘಕ್ಕೆ ಕ್ಯೂಆರ್ ಕೋಡ್ ಹಸ್ತಾಂತರಿಸುವ ಮೂಲಕ ಜು.14 ರಂದು ಸಂಘದ ಆವರಣದಲ್ಲಿ ಚಾಲನೆ ನೀಡಲಾಯಿತು.
ಆರ್ಲಪದವು ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ನಿಷಿ ನಜೀರ್ ಹಾಗೂ ಸಹಾಯಕ ವ್ಯವಸ್ಥಾಪಕರಾದ ಅಮಿತ್ ಷಾ ಕುಮಾರ್ ಇವರು ಕ್ಯೂಆರ್ ಕೋಡ್ ಅನ್ನು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಇವರಿಗೆ ಹಸ್ತಾಂತರಿಸಿದರು.

ಹಸ್ತಾಂತರ ಕಾರ್ಯಕ್ರಮದಲ್ಲಿ ದ.ಕ.ಹಾಲು ಒಕ್ಕೂಟದ ಉಪಸ್ಥಾಪಕ ಡಾ.ಸತೀಶ್ ರಾವ್, ಸಹಾಯಕ ವ್ಯವಸ್ಥಾಪ ಡಾ.ಅನುದೀಪ ಕುಮಾರ್, ವಿಸ್ತರಣಾಧಿಕಾರಿ ಮಾಲತಿ ಎಂ ಹಾಗೂ ಸಂಘದ ಉಪಾಧ್ಯಕ್ಷ ಉಮೇಶ್ ಬಲ್ಯಾಯ ಕೊಂದಲಡ್ಕ, ನಿರ್ದೇಶಕರಾದ ಉದಯ ಕುಮಾರ್ ರೈ ಕಡಮಾಜೆ, ವಿಶ್ವನಾಥ ರೈ ಸೂರಂಬೈಲು, ವೆಂಕಟಕೃಷ್ಣ ಭಟ್ ಬೈಂಕ್ರೋಡು, ಶ್ರೀಧರ ಭಟ್ ಪಾಲ್ತಮೂಲೆ, ಯತೀಶ್ ಕುಮಾರ್ ರೈ ಪಡ್ಯಂಬೆಟ್ಟು, ಸಂತೋಷ್ ಕುಮಾರ್ ರೈ ಗಿಳಿಯಾಲು, ಗುಲಾಬಿ ರ ಬೊಳ್ಳಿಂಬಳ, ಸೀತಾ ಬೊಳ್ಳಿಂಬಳ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಎ, ಸಿಬ್ಬಂದಿಗಳಾದ ಹರೀಶ್ ಕುಮಾರ್ ಕೆ, ಶಾರದ, ಸ್ವಸ್ತಿಕ್ ಶ್ರೀ ರಾಮ್ ಸಹಕರಿಸಿದರು.
ಸಂಘದಲ್ಲಿ ಪಾರದರ್ಶಕ ವ್ಯವಹಾರಕ್ಕಾಗಿ ಈ ವ್ಯವಸ್ಥೆ ಜಾರಿಗೊಳಿಸಿದ್ದು ಇದರಿಂದ ಅವ್ಯವಹಾರ ನಡೆಯದಂತೆ ತಡೆಯಲು ಸಹಕಾರಿಯಾಗಿದೆ. ಇಡೀ ದ.ಕ ಹಾಲು ಒಕ್ಕೂಟದಲ್ಲಿ ಇರುವ ಒಟ್ಟು 751 ಸಹಕಾರ ಸಂಘದಲ್ಲಿ ಈ ವ್ಯವಸ್ಥೆಯನ್ನು ಜಾರಿ ಗೊಳಿಸಿದ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘ ಪಾತ್ರವಾಗಿದೆ.