ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಮತ್ತು ಕೊಲೋಬರೇಟಿವ್ ಪಬ್ಲಿಷರ್ಸ್, ಕಂಪೆನಿ ಮೈಸೂರು ಇದರ ವತಿಯಿಂದ ಒಂದು ದಿನದ ನರ್ಸರಿ ಟೀಚರ್ಸ್ ತರಬೇತಿ ಶಿಬಿರ ರೋಟರಿ ಮನಿಷಾದ ಡಾ. ಗೌರಿ ಪೈ ಸಭಾ ಭವನದಲ್ಲಿ ಜು.15ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕು.ರೂಪಾ ಮಂಡ್ಯ ರವರು, ಪುಟ್ಟ ಮಕ್ಕಳನ್ನು ನರ್ಸರಿ ಶಾಲೆಗಳಲ್ಲಿ ನೋಡಿಕೊಳ್ಳುವ ರೀತಿ, ಆಟದ ಜೊತೆ ಜೊತೆಯಲ್ಲಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸುತ್ತಾ ಬೋಧನೆ ಮಾಡುವ ಹೊಸ ಹೊಸ ವಿಧಾನಗಳನ್ನು ತಿಳಿಸಿಕೊಟ್ಟರು ಜೊತೆಗೆ ಈ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದಕ್ಕೆ ವಂದಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕೊಲೋಬರೇಟಿವ್ ಪಬ್ಲಿಷರ್ಸ್ ಕಂಪೆನಿಯ ಮಂಗಳೂರು ವಲಯದ ಸಂಯೋಜಕ ಧೂಮಡ್ಕದ ಅವಿನಾಶ್ ರವರು ರೂಪಿಸಿದ್ದರು. ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಉಲ್ಲಾಸ್ ಪೈಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕ್ಲಬ್ ಪೂರ್ವಾಧ್ಯಕ್ಷ ಜ್ಯೋ ಡಿ’ಸೋಜ, ಅವಿನಾಶ್ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಡಾ.ಪೊಡಿಯ ವಂದಿಸಿದರು. ಕೋಶಾಧಿಕಾರಿ ಸ್ವಾತಿ ಮಲ್ಲಾರ ಉಪಸ್ಥಿತರಿದ್ದರು. ಪುತ್ತೂರು ಹಾಗೂ ಕಡಬ ತಾಲೂಕಿನಿಂದ ಒಟ್ಟು 35 ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.