ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ವತಿಯಿಂದ ಪಾತ್ರೆ ಹಾಗೂ ಸಾಮಾಗ್ರಿ ಕೊಡುಗೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಕ್ಷೇತ್ರ ಸಮಿತಿ ಪುತ್ತೂರು ಇದರ 9 ವಲಯಗಳ ಸಹಕಾರದೊಂದಿಗೆ ಕ್ಷೇತ್ರ ಸಮಿತಿ ಪುತ್ತೂರು ಇದರ ವತಿಯಿಂದ ಮಂಗಳೂರಿನ ಗೋರಿಗುಡ್ಡೆಯಲ್ಲಿರುವ ರಾಜ್ಯ ಸಮಿತಿಯ ಟೈಲರ್‍ಸ್ ಭವನಕ್ಕೆ ಅತೀ ಅಗತ್ಯವಿರುವ ಪಾತ್ರೆಗಳನ್ನು ಹಾಗೂ ಸಾಮಾಗ್ರಿಗಳನ್ನು ಕೊಡುಗೆಯಾಗಿ ಜು.13ರಂದು ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ರಾಜ್ಯ ಸಮಿತಿಯ ಹಾಗೂ ಜಿಲ್ಲಾ ಸಮಿತಿಯ ಹಾಗೂ ಕ್ಷೇತ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷೆ ಉಮಾ ಯು ನಾೖಕ್, ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಅನಿಲ, ರಾಜ್ಯ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕರು ರಘುನಾಥ ಬಿ, ದ.ಕ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ.ಎನ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಶಂಭು ಬಲ್ಯಾಯ, ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಸುರೇಖಾ, ಉಪ್ಪಿನಂಗಡಿ ವಲಯಯ ನಿಕಟ ಪೂರ್ವ ಅಧ್ಯಕ್ಷ ಕೃಷ್ಣ ನಾಯಕ್, ರಾಜ್ಯ ಸಮಿತಿಯ ಸ್ಥಾಪಕ ಸದಸ್ಯ ವಸಂತ ಡಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಎ, ರಾಜ್ಯ ಸಮಿತಿಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷೆ ವಿದ್ಯಾ ಶೆಟ್ಟಿ, ದ.ಕ ಜಿಲ್ಲಾ ಪ್ರ. ಕಾರ್ಯದರ್ಶಿ ಮೋಹನ್ ಎಸ್, ದ.ಕ ಜಿಲ್ಲಾ ಕೋಶಾಧಿಕಾರಿ ಚಕ್ರೇಶ್ ಅಮಿನ್, ದ.ಕ ಜಿಲ್ಲಾ ಉಪಾಧ್ಯಕ್ಷೆ ಶಾಂಭವಿ ಬಂಗೇರ, ದ.ಕ ಜಿಲ್ಲಾ ಉಪಾಧ್ಯಕ್ಷ ದೇಜಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here