ಕೆಯ್ಯೂರು: ಕೆ ಪಿ ಎಸ್ ಕೆಯ್ಯೂರಿನ ಪ್ರೌಢಶಾಲಾ ವಿಭಾಗದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ನಾಯಕ ಹಾಗೂ ಉಪನಾಯಕ ಸ್ಥಾನಗಳಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯಿತು.
ಮೊಬೈಲ್ ಅಪ್ಲಿಕೇಶನ್ ನ ಈವಿಎಂ ಯಂತ್ರ ಬಳಸಿ ಚುನಾವಣೆ ನಡೆಸಲಾಯಿತು. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್ ಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿ ನೈಜ ಚುನಾವಣೆಯ ಅನುಭವ ಪಡೆದರು. ಮುಖ್ಯಮಂತ್ರಿಯಾಗಿ 10ನೇ ತರಗತಿಯ ಭವಿತ್ ಕುಮಾರ್ ಹಾಗೂ ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಅಹಮ್ಮದ್ ಫಯಾಜ್ ಬಹುಮತದೊಂದಿಗೆ ಆಯ್ಕೆಯಾದರು. 10ನೇ ತರಗತಿಯ ಮಹಮ್ಮದ್ ಸೂಫಿಯಾನ್ ವಿರೋಧ ಪಕ್ಷದ ನಾಯಕ. 9 ನೇ ತರಗತಿಯ ರಮ್ಲತ್ ಬೀವಿ ಸಭಾಪತಿಯಾಗಿ. ಮಂತ್ರಿಮಂಡಲದ ಇತರ ಸದಸ್ಯರನ್ನು ಶಿಕ್ಷಕರು ಆಯ್ಕೆ ಮಾಡಿದರು. ಉಪಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆ ಎಸ್ ರವರ ಸೂಚನೆಯಂತೆ ಶಿಕ್ಷಕಿ ಮೋಲಿ ವಿಲ್ಮಾ ಪಿಂಟೊ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಿದರು. ಉಳಿದ ಶಿಕ್ಷಕರು ಸಹಕರಿಸಿದರು.