ಕೆಯ್ಯೂರು ಶ್ರೀ ವರ ಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ- ಅಧ್ಯಕ್ಷೆ: ಮೀನಾಕ್ಷಿ ವಿ.ರೈ, ಕಾರ್ಯದರ್ಶಿ: ನಯನ ಮಾಡಾವು, ರೇಖಾ ಕೆಂಗುಡೇಲು

0

ಪುತ್ತೂರು: ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕೆಯ್ಯೂರು ಇದರ ಆಶ್ರಯದಲ್ಲಿ ಆ.8ರಂದು ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎರಡನೇ ಬಾರಿಗೆ ಮೀನಾಕ್ಷಿ ವಿ.ರೈ ಆಯ್ಕೆಯಾದರು ಉಳಿದಂತೆ ಕಾರ್ಯದರ್ಶಿಯಾಗಿ ನಯನ ಶರತ್ ಕುಮಾರ್ ಮಾಡಾವು, ಕೋಶಾಧಿಕಾರಿಯಾಗಿ ರೇಖಾ ಕೆಂಗುಡೇಲುರವರುಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರುಗಳಾಗಿ ಭವಾನಿ ಪಲ್ಲತ್ತಡ್ಕ, ಮಮತಾ ರೈ, ರೂಪ ರೈ, ಹರಿಣಾಕ್ಷಿ, ಗೀತಾಲಕ್ಷ್ಮೀ, ಸುಜಯ, ಯಶಸ್ವಿನಿ, ಚಿತ್ರ ಮತ್ತು ಸುಶೀಲ ರೈರವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here