ಪುತ್ತೂರು: ತಾಲೂಕು ಮಹಿಳಾ ಬಂಟರ ವಿಭಾಗದ ಕಾರ್‍ಯಕಾರಿ ಸಮಿತಿ ಸಭೆಯು ಜು.15ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರುರವರು ಮಾತನಾಡಿ ಆ.3ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನದ ತನಕ ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಆಶ್ರಯದಲ್ಲಿ ಆಟಿದ ಕೂಟ ಕಾರ್‍ಯಕ್ರಮ, ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಹಾಗೂ ಯುವ ಮತ್ತು ವಿದ್ಯಾರ್ಥಿ ಬಂಟರ ವಿಭಾಗದ ಸಹಯೋಗದೊಂದಿಗೆ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಲಿದ್ದು, ಈ ಕಾರ್‍ಯಕ್ರಮದಲ್ಲಿ ಪುತ್ತೂರು-ಕಡಬ ತಾಲೂಕು ವ್ಯಾಪ್ತಿಯಲ್ಲಿ ಇರುವ ಎಲ್ಲಾ ಬಂಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ಮಾದರಿ ಕಾರ್‍ಯಕ್ರಮವಾಗಬೇಕು. ಈ ಬಾರಿ ಆಟಿದ ಕೂಟ ಕಾರ್‍ಯಕ್ರಮದ ನೇತೃತ್ರವನ್ನು ಮಹಿಳಾ ಬಂಟರ ವಿಭಾಗದವರು ವಹಿಸಿಕೊಂಡು, ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಬೇಕೆಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಹೇಳಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಆಟಿದಕೂಟ ಕಾರ್‍ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಿದರು.

ಬಂಟ ಮಹಿಳೆಯರ ಸಂಘಟನಾ ಶಕ್ತಿ- ಕಾವು ಹೇಮನಾಥ ಶೆಟ್ಟಿ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಆಟಿದ ಕೂಟ ಕಾರ್‍ಯಕ್ರಮ ವೈವಿಧ್ಯಮಯವಾಗಿ ಮೂಡಿಬರಬೇಕು, ಪುತ್ತೂರು ತಾಲೂಕು ಬಂಟ ವಿಭಾಗದ ಮಹಿಳೆಯರು ಸಂಘಟನಾ ಶಕ್ತಿಯ ಮೂಲಕ ಹೆಚ್ಚು ಬಂಟ ಮಹಿಳೆಯರನ್ನು ಈ ಕಾರ್‍ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕು. ಒಂದು ಉತ್ತಮ ಕಾರ್‍ಯಕ್ರಮವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಬಂಟ ಮಹಿಳೆಯರು ಒಂದಾಗಿ- ದಂಬೆಕ್ಕಾನ ಸದಾಶಿವ ರೈ
ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾದ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ ಬಂಟ ಮಹಿಳೆಯರ ಸಂಘಟನೆಯನ್ನು ಗ್ರಾಮ ಗ್ರಾಮದಲ್ಲಿ ಮಾಡುವ ಮೂಲಕ ಬಂಟ ಮಹಿಳೆಯರು ಒಂದಾಗಬೇಕು, ಗೀತಾ ಮೋಹನ್ ರೈಯವರ ನೇತೃತ್ರದಲ್ಲಿ ನಡೆಯುವ ಆಟಿದ ಕೂಟ ಯಶಸ್ಸಿ ಕಾರ್‍ಯಕ್ರಮವಾಗಲಿ ಎಂದರು.
ನನ್ನ ಸಹಕಾರ ಇದೆ- ಮಲ್ಲಿಕಾ ಪ್ರಶಾಂತ್ ಪಕ್ಕಳ
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳರವರು ಮಾತನಾಡಿ ಮಹಿಳಾ ಬಂಟರ ವಿಭಾಗದ ನೇತೃತ್ರವನ್ನು ನಡೆಯಲಿರುವ ಆಟಿದ ಕೂಟ ಕಾರ್‍ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟರ ಸಂಘದ ನಿರ್ದೇಶಕರಾದ ಸ್ವರ್ಣಲತಾ ಜೆ.ರೈ, ಹರಿಣಾಕ್ಷಿ ಜೆ.ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಮಹಿಳಾ ಬಂಟರ ವಿಭಾಗದ ಕಾರ್‍ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕ್ಕೋಡಿ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ.ರೈ ವಂದಿಸಿದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ಗಣೇಶ್ ಶೆಟ್ಟಿ ಹಾಗೂ ತಾಲೂಕು ಮಹಿಳಾ ಬಂಟರ ವಿಭಾಗದ ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಬಂಟರಭವನದ ವ್ಯವಸ್ಥಾಪಕ ರವಿಚಂದ್ರ ರೈ ಕುಂಬ್ರ ಮತ್ತು ಭಾಸ್ಕರ್ ರೈ ಕಾರ್‍ಯಕ್ರಮದಲ್ಲಿ ಸಹಕರಿಸಿದರು.