ಪುತ್ತೂರು: ಆನೆ ದಾಳಿಗೆ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕೊಕ್ಕಡ ಸಮೀಪ ನಡೆದಿದ್ದು, ಬಾಲಕೃಷ್ಣ ಅವರನ್ನು ಕೊಂದ ಸ್ಥಳದಲ್ಲೇ ಎರಡು ಆನೆಗಳು ಬೀಡುಬಿಟ್ಟಿವೆ. ಸದ್ಯ ಆನೆಗಳು ಆಕ್ರೋಶದಲ್ಲಿದ್ದು, ರಾತ್ರಿಯಾಗುತ್ತಲೇ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಒಂದು ಹೆಣ್ಣು, ಒಂದ ಗಂಡು ಆನೆಗಳು ಇದ್ದು, ಈಗಲೇ ಕಾರ್ಯಾಚರಣೆ ಕೈಗೊಂಡಾಗ ಎರಡೂ ಆನೆಗಳು ವಿಭಾಗವಾಗಿ ಓಡಿ ಅವಾಂತರ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಸಿಬ್ಬಂದಿ ನಿಯೋಜಿಸಿ ರಾತ್ರಿಯಾಗುತ್ತಲೇ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಆದರೆ ಸ್ಥಳದಲ್ಲಿ ಜಮಾಯಿಸಿರುವ ಜನರು ಹಾಗೂ ಪಂಚಾಯತ್ ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಇವರಿಗೆ ಸದ್ಯದ ಸೂಕ್ಷ್ಮ ಪರಿಸ್ಥಿತಿಯನ್ನು ತಿಳಿಸಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.