ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಮುಂಭಾಗ ರಸ್ತೆಯಲ್ಲಿ ಬಿದ್ದಿರುವ ಕಟೌಟ್ ವೊಂದನ್ನು ಅದೇ ದಾರಿಯಲ್ಲಿ ಮಳೆ ಹಾನಿಗೊಂಡ ಪ್ರದೇಶಕ್ಕೆ ತೆರಳುತ್ತಿದ್ದ ನಗರಸಭೆ ಉಪಾಧ್ಯಕ್ಷ ಮತ್ತು ಪೌರಾಯುಕ್ತರು ಗಮನಿಸಿ ಕಟೌಟ್ ಅನ್ನು ಎತ್ತಿಕೊಂಡು ಬೇರೆ ಕಡೆ ಸ್ಥಳಾಂತರ ಮಾಡುವ ಮೂಲಕ ಸಾಮಾಜಿ ಕಾಳಜಿಯನ್ನು ತೋರಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.
