ಪುತ್ತೂರು:ಹಿರಿಯ ಕಂಬಳ ಓಟಗಾರರಾಗಿದ್ದ ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಲಿಂಗಪ್ಪ ರೈ ಬೈಲುಗುತ್ತು(88ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜು.17ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರೂ ಆಗಿದ್ದ ಇವರು ಕೆಲವು ವರ್ಷಗಳ ಹಿಂದೆ ಕಂಬಳದ ಓಟಗಾರರಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ರಾಜೀವಿ ಎಲ್.ರೈ, ಪುತ್ರ ನವೀನ್ ಕುಮಾರ್ ರೈ, ಪುತ್ರಿಯರಾದ ಪದ್ಮಾಕ್ಷಿ ತಿಮ್ಮಪ್ಪ ರೈ,ಬೇಬಿ ರಾಧಾಕೃಷ್ಣ ಶೆಟ್ಟಿ, ಮೀನಾಕ್ಷಿ ಅರುಣ್ ಕುಮಾರ್ ರೈ ಪೋಲಾಜೆ,ಸೊಸೆಯಂದಿರಾದ ಲೀಲಾವತಿ ನವೀನ್ ಕುಮಾರ್ ರೈ, ಕವಿತಾಪ್ರವೀಣ್ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.