ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ 2022-2025ನೇ ಸಾಲಿನ ದ್ವಿತೀಯ ತ್ರೈವಾರ್ಷಿಕ ಮಹಾಸಭೆ ಜು.20ರಂದು ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ರೈ ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಸಭೆಯಲ್ಲಿ ತ್ರೈವಾರ್ಷಿಕ ವರದಿ ಮಂಡನೆ, ಕಳೆದ ತ್ರೈವಾರ್ಷಿಕ ಲೆಕ್ಕಚಾರದ ವಿವರ ಪ್ರಸ್ತಾವನೆ ಮತ್ತು ಮುಂದಿನ ಮೂರು ವರ್ಷಗಳ ಅವದಿಗೆ ನೂತನ ಆಡಳಿತ ಮಂಡಳಿಯ ರಚನೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.