ಕೆಯ್ಯೂರು: ಬಿಲ್ಲವ ಗ್ರಾಮ ಸಮಿತಿ ಮತ್ತು ಮಹಿಳಾ ಗ್ರಾಮ ಸಮಿತಿಯು ಕೆಯ್ಯೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ ಅಧ್ಯಕ್ಷತೆಯಲ್ಲಿ ಕೆಯ್ಯೂರು ದೇವಿ ನಗರ ಬ್ರಹ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಮುಂದಿನ ಮೂರು ವರ್ಷಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಬಿ.ವಿ ವಿಶ್ವನಾಥ್ ಪೂಜಾರಿ ಬೊಳಿಕಲ ಸುಳ್ಯ, ಕಾರ್ಯದರ್ಶಿಯಾಗಿ ರಕ್ಷೀತ್ ಕೆ. ಪೂಜಾರಿ, ಉಪಾಧ್ಯಕ್ಷರಾಗಿ ಪ್ರವೀಣ ಕೆಂಗುಡೇಲು, ಕೋಶಾಧಿಕಾರಿಯಾಗಿ ಚಂದ್ರಶೇಖರ ಪೂಜಾರಿ ಕಣಿಯಾರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದೇ ರೀತಿ ಮಹಿಳಾ ಘಟಕ ಅಧ್ಯಕ್ಷರಾಗಿ ಅರುಣಾ ಕೃಷ್ಣಪ್ಪ ಪೂಜಾರಿ ಕೆಯ್ಯೂರು, ಕಾರ್ಯದರ್ಶಿಯಾಗಿ ಹೇಮಲತಾ ಕಿನ್ಯಾನ, ಉಪಾಧ್ಯಕ್ಷರಾಗಿ ಹೇಮಲತಾ ಕೆಯ್ಯೂರು, ಕೋಶಾಧಿಕಾರಿಯಾಗಿ ಉಷಾ ಕೈಕಂಬ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಸಂಚಾಲಕರಾದ ಜಯಂತ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ಕಾರ್ಯದರ್ಶಿ ರಕ್ಷಿತ್ ಪೂಜಾರಿ ವಂದಿಸಿದರು.