ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಬೊಳಂತಿಮೊಗರು ಶಾಲೆಯ ಬಳಿ ಇ – ಖಾತಾ ಆಂದೋಲನ

0

ವಿಟ್ಲ : ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೊಳಂತಿಮೊಗರು ಶಾಲೆಯ ಬಳಿ ವಾರ್ಡ್ ಮಟ್ಟದ ಇ ಖಾತಾ ಆಂದೋಲನ ನಡೆಸಲಾಯಿತು.


ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ರವರು ಆಂದೋಲನಕ್ಕೆ ಚಾಲನೆ ನೀಡಿದರು. ಮುಖ್ಯಾಧಿಕಾರಿ ಕರುಣಾಕರ ವಿ, ಪ್ರಭಾರ ಕಂದಾಯ ನಿರೀಕ್ಷಕರಾದ ಶ್ರೀ ಶೈಲ ಸಂಕನಗೌಡ, ತೆರಿಗೆ ವಸೂಲಿಗರಾದ ಚಂದ್ರಶೇಖರ ವರ್ಮ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಬಿ’ ಖಾತೆ ದಾಖಲಿಸಲು ಆ.10 ಕೊನೆ

ಸಾರ್ವಜನಿಕರು ತಮ್ಮ ಆಸ್ತಿಯ ತೆರಿಗೆ ಪಾವತಿಸಿ ಇ ಖಾತಾ ಮಾಡಿಸಲು ಅವಕಾಶವಿದೆ. ದಾಖಲೆ ಸರಿ ಇಲ್ಲದೆ ಇರುವವರು” ಬಿ” ಖಾತೆ ಮಾಡಿಸಬಹುದಾಗಿದ್ದು, “ಬಿ” ಖಾತೆ ದಾಖಲಿಸಲು ಆ.10 ಕೊನೆಯ ದಿನಾಂಕ ಆಗಿರುತ್ತದೆ. ಆದ್ದರಿಂದ ದಾಖಲೆ ಸರಿ ಇಲ್ಲದಿರುವವರು ಈ ದಿನಾಂಕದೊಳಗೆ ಪಟ್ಟಣ ಪಂಚಾಯತ್ ಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here