ಪುತ್ತೂರು: ದೇಶ-ವಿದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ, ಸುಗಮ ಸಂಗೀತ, ವೀಣೆ, ಕೀ ಬೋರ್ಡ್, ಆನ್ ಲೈನ್ ಮುಖಾಂತರವೂ ಸಂಗೀತ ವಿದ್ಯಾದಾನ ಮಾಡಿದಂತಹ ಮೂಲತ ಕಾಸರಗೋಡಿನವರಾದ ವಿದ್ವಾನ್ ನಟರಾಜ್ ಶರ್ಮ ಅವರಿಗೆ ಅಸಹಾಯಕರ ಸೇವಾ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಪುತ್ತೂರು ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.
ಅಸಹಾಯಕರ ಸೇವಾ ಟ್ರಸ್ಟಿನ ಅಧ್ಯಕ್ಷ ನಯನ ರೈ, ಲಯನ್ ಅಧ್ಯಕ್ಷೆ ಪ್ರೇಮಲತಾ ರಾವ್ ಮತ್ತಿತರರು ಉಪಸ್ಥಿತರಿದ್ದರು.