ಆ.15: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ `ಎಕ್ಸೆಲೆನ್ಸಿಯಾ-2025′ ವಿನೂತನ ಕಾರ್ಯಕ್ರಮ

0

ವಿವಿಧ ಕ್ಷೇತ್ರಗಳ ಸಾಧಕರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಎಕ್ಸೆಲೆನ್ಸಿಯಾ-2025 ವಿನೂತನ ಕಾರ್ಯಕ್ರಮ ಆ.15ರಂದು ನೇರಳಕಟ್ಟೆ ಜನಪ್ರಿಯಾ ಗಾರ್ಡನ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಎಕ್ಸ್‌ಪರ್ಟ್‌ಗಳು ಭಾಗವಹಿಸಲಿದ್ದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಪೋಷಕರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದ್ದು ಹತ್ತು ಮಂದಿ ಪೋಷಕರಿಗೆ `ಪ್ರೌಡ್ ಪೇರೆಂಟ್’ ಅವಾರ್ಡ್ ನೀಡಲಾಗುತ್ತದೆ. ಅಲ್ಲದೇ ಲಕ್ಕಿ ಸ್ಟೂಡೆಂಟ್, ಲಕ್ಕಿ ಫಾದರ್, ಲಕ್ಕಿ ಮದರ್ ಮೊದಲಾದ ಅದೃಷ್ಟ ಬಹುಮಾನ ಕೂಡಾ ಇರಲಿದೆ. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಕೂಡಾ ಏರ್ಪಡಿಸಲಾಗುತ್ತದೆ.


ಜನಪ್ರಿಯಾ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ.ಅಬ್ದುಲ್ ಬಶೀರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದ ಅಬು ಸಾಲಿಯಾ ಖಾನ್ (ಯುಪಿಎಸ್‌ಸಿ ಎಐಆರ್ ೫೮೮ & ಐಎಫ್‌ಒಎಸ್ ಎಐಆರ್ ೧೦೭), ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಇಲಾಖೆ ಮಕ್ಕಳ ಅಭಿವೃದ್ಧಿ ಬೆಂಗಳೂರು ಇದರ ಜಂಟಿ ನಿರ್ದೇಶಕಿ ಹಲೀಮಾ ಇಸ್ಮಾಯಿಲ್, ನೋವಿಗೊ ಸೊಲ್ಯೂಷನ್ಸ್‌ನ ಸಹಸಂಸ್ಥಾಪಕರು ಮತ್ತು ಸಿಸಿಒ ಆಗಿರುವ ಶಿಹಾಬ್ ಕಲಂದರ್, ಚಾರ್ಟರ್ಡ್ ಅಕೌಂಟೆಂಟ್ ಸಿಎ ತಬಿಶ್ ಹಸನ್, ಕಾಸರಗೋಡು ಉದ್ಮಾ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ನಾಜಿಹ್ ಅಹ್ಮದ್, ಎಂ.ಟೆಕ್, ಐಐಟಿ ಮದ್ರಾಸ್, ಎಲ್ & ಟಿ ಬೆಂಗಳೂರು ಇದರ ಹಿರಿಯ ಇಂಜಿನಿಯರ್ ಶೇಖ್ ಮೊಹಮ್ಮದ್ ಜುನೈನ್, ಬೆಂಗಳೂರು ಆಚಾರ್ಯ ಸಂಸ್ಥೆಯ ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕರಾದ ಮೊಹಮ್ಮದ್ ಸ್ವರೂಪ್, ವಿಟಿಯುನಿಂದ ದಾಖಲೆಯ ೧೬ ಚಿನ್ನದ ಪದಕಗಳನ್ನು ಗಳಿಸಿದ ಗೋಲ್ಡನ್ ಗರ್ಲ್ ಖ್ಯಾತಿಯ ಬುಷ್ರಾ ಮತೀನ್ ರಾಯಚೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here