ಪೆರ್ನೆ: ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾನಗರ, ದರ್ಬೆ ಇದರ ವಿದ್ಯಾರ್ಥಿ ಸಂಘದ ಉದ್ಘಾಟನೆ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.

ಬಂಟ್ವಾಳ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ರೊ. ಮೇಜರ್ ಡೋನಾರ್ ಬಸ್ತಿ ಮಾದವ ಶೆಣೈ ಉದ್ಘಾಟಿಸಿ, ಶುಭಕೋರಿದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಜಯಾನಂದ ರೈ ಮಾತನಾಡಿ, ಶಿಕ್ಷಕರ ಮತ್ತು ಪೋಷಕರ ಮತ್ತು ಮಕ್ಕಳ ನಡುವೆ ರಚನಾತ್ಮಕ ಶೈಲಿಯಲ್ಲಿ ಶಿಕ್ಷಕರ ಸಂಘ ಹಾಗೂ ವಿದ್ಯಾರ್ಥಿ ಸಂಘ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಇನ್ನೊರ್ವ ಅತಿಥಿ ಮ್ಯಾಕ್ಸಿಮ ಲೋಬೊ ಮಾತನಾಡಿ, ಕನಸು ಕಂಡಿರುವ ಮಕ್ಕಳ ಮನಸ್ಸು ಯಾವುದೇ ದುಶ್ಚಾಟಗಳಿಗೆ ಬಲಿಯಾಗದಿರಲಿ ಎಂದರು.
ಪ್ರೌಢಶಾಲೆ ಮುಖ್ಯ ಗುರು ಸತ್ಯನಾರಾಯಣ ರೈ ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾಲಯದ ಪ್ರಾಚಾರ್ಯರು ಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿ ರೊ ಯಾಸಿರ್ ಹಾಗೂ ರೋಟರಿ ಬಂಟ್ವಾಳ ಇದರ ಖಜಾಂಚಿ ವಿಫ್ರೆಡ್ ಶಾಂತಿ ಪ್ರಕಾಶ್ ಉಪಸ್ಥಿತರಿದ್ದರು. ಉಪನ್ಯಾಸಕ ಅನಿಲ್ ಕುಮಾರ್ ಸ್ವಾಗತಿಸಿ, ಗಣೇಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಇಂದಿರಾ ಧನ್ಯವಾದಗೈದರು.