ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ತನ್ನ ಸೇವಾ ಚಟುವಟಿಕೆಗಳ ಮೂಲಕ ಸತತ ಮೂರನೇ ಬಾರಿಗೆ ಜಿಲ್ಲಾ ಲಯನ್ಸ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
2021ರಲ್ಲಿ ಪ್ರಾರಂಭಗೊಂಡು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಐದು ವರ್ಷದೊಳಗಿನ 36 ಕ್ಲಬ್‌ಗಳಲ್ಲಿ ಪುತ್ತೂರ‍್ದ ಮುತ್ತು ಕ್ಲಬ್ 3ನೇ ಬಾರಿಗೆ ಜಿಲ್ಲಾ ಲಯನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕ್ಲಬ್‌ನ ಸೇವಾ ಚಟುವಟಿಕೆಗಳಾದ ಗವರ್ನಮೆಂಟ್ ಹಾಸ್ಪಿಟಲ್ ಸಪೋರ್ಟ್, ಡಯಾಬಿಟಿಸ್ ಕೇರ್‌ನಲ್ಲಿ ಪ್ರಥಮ ಸ್ಥಾನ, ಮೆಡಿಕಲ್ ಆಯ್ಡ್, ರಿಲೀವ್ ಹಂಗರ್‌ನಲ್ಲಿ 3ನೇ ಸ್ಥಾನ, ಎಂಪವರ್ ಯೂತ್‌ನಲ್ಲಿ 4ನೇ ಸ್ಥಾನ, ರೋಡ್ ಸೇಫ್ಟಿಯಲ್ಲಿ 4ನೇ ಸ್ಥಾನ, ವುಮನ್ ಎಂಪವರ್, ಸ್ವಚ್ಛ ಭಾರತ್ ಮತ್ತು ಲೀಗಲ್ ಅವರ್ನೆಸ್‌ನಲ್ಲಿ 5 ಸ್ಥಾನ ಪಡೆದುಕೊಂಡಿದೆ.
ಕ್ಲಬ್‌ನ ಅಧ್ಯಕ್ಷೆ ವೇದಾವತಿ ರಾಜೇಶ್ ಉತ್ತಮ ಅಧ್ಯಕ್ಷ, ಕಾರ್ಯದರ್ಶಿ ಭಾಗ್ಯೇಶ್ ರೈ ಉತ್ತಮ ಕಾರ್ಯದರ್ಶಿ, ಖಜಾಂಚಿ ವತ್ಸಲಾ ಶೆಟ್ಟಿ ಉತ್ತಮ ಖಜಾಂಚಿ ಹಾಗೂ ಲ್ಯಾನ್ಸಿ ಮಸ್ಕರೇನಸ್ ಡೈಮಂಡ್ ರೀಜನ್ ಅಂಬಾಸಿಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಂಗಳೂರಿನ ವಾಮಂಜೂರು ಚರ್ಚ್‌ಹಾಲ್‌ನಲ್ಲಿ ನಡೆದ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317ಡಿ ಇದರ 2024-25ರ ಜಿಲ್ಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.