ಆಲಂಕಾರು ಜೆ.ಜೆ.ಸಿ ವಿಭಾಗಕ್ಕೆ ವಲಯ ಅತ್ಯುತ್ತಮ ಜೆಜೇಸಿ ವಿಂಗ್ ರನ್ನರ್ ಅಪ್ ಪ್ರಶಸ್ತಿ

0

ಆಲಂಕಾರು: ಜೇಸಿಐ ಆಲಂಕಾರು ಘಟಕದ ಜೂನಿಯರ್ ಜೇಸಿ ವಿಭಾಗಕ್ಕೆ ವಲಯದ ಅತ್ಯುತ್ತಮ ಜೆಜೇಸಿ ವಿಂಗ್ ರನ್ನರ್ ಅಪ್ ಪ್ರಶಸ್ತಿ ದೊರೆತಿದೆ.


ಜೇಸಿಐ ಕುಂದಾಪುರ ಸಿಟಿ ಇದರ ಆತಿಥ್ಯದಲ್ಲಿ ನಡೆದ ವಲಯದ ಬಹು ನಿರೀಕ್ಷಿತ ಕಾರ್ಯಕ್ರಮ ವಲಯ 15ರ ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿ ಸಮ್ಮೇಳನದಲ್ಲಿ ಜೇಸಿಐ ಆಲಂಕಾರು ಘಟಕದಲ್ಲಿ ಜೂನಿಯರ್ ಜೇಸಿ ವಿಭಾಗದಿಂದ ನಡೆಸಲಾದ ಅತ್ಯುತ್ತಮ ಕಾರ್ಯಕ್ರಮಗಳಿಗಾಗಿ ವಲಯದ ಅತ್ಯುತ್ತಮ ಜೆಜೇಸಿ ವಿಂಗ್ ರನ್ನರ್ ಅಪ್ ಪ್ರಶಸ್ತಿಯು ಪ್ರಶಸ್ತಿ ಲಭಿಸಿದೆ.

ಮಹಿಳಾ ಜೇಸಿ ವಿಭಾಗದಿಂದ ನಡೆಸಲಾದ ಮಹಿಳಾ ದಿನಾಚರಣೆ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ವಿಶೇಷ ಮನ್ನಣೆಗಳು, ಕಾರ್ಯಕ್ರಮಗಳನ್ನು ಗಮನಿಸಿ ಮಹಿಳಾ ಜೇಸಿ ವಿಭಾಗಕ್ಕೆ ಟಾಪ್ 8 ಪ್ರಶಸ್ತಿ ಲಭಿಸಿದೆ. ಆಲಂಕಾರು ಜೇಸಿಐ ಘಟಕದ ಅಧ್ಯಕ್ಷ ಜೇಸಿ ಗುರುರಾಜ್ ರೈ, ಉಪಾಧ್ಯಕ್ಷೆ ಜೇಸಿ ಧನ್ಯ ಪ್ರಶಾಂತ್ ರೈ, ಮಹಿಳಾ ಜೇಸಿ ಅಧ್ಯಕ್ಷೆ ಜೇಸಿ ಸುನೀತಾ ಜಿ ರೈ, ಜೂನಿಯರ್ ಜೇಸಿ ಅಧ್ಯಕ್ಷೆ ಜೆಜೇಸಿ ಕೃತಿ ಹಾಗೂ ಜೇಸಿ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here