ಪುತ್ತೂರು: 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಅನುಪ್ರಣೀತ್ ಉಪಾಧ್ಯಾಯ ಕೆ. ಹೊಸಮಠ ರವರು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ನಿವೃತ್ತ ಮುಖ್ಯಶಿಕ್ಷಕ ಹರಿಪ್ರಸಾದ ಉಪಾಧ್ಯಾಯ ಹೊಸಮಠ ಹಾಗೂ ಕುಟ್ರುಪ್ಪಾಡಿ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ರತ್ನಾವತಿ ಕೆ. ದಂಪತಿ ಪುತ್ರರಾದ ಇವರು ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು, ಮಂಗಳೂರು ಮ್ಯಾಪ್ಸ್ ಪದವಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡಿದ್ದು ಮಂಗಳೂರಿನ ಹೆಸರಾಂತ ಸಿ.ಎ. ಶಾಮ್ಭಟ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.
