ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವು ಇದರ ವತಿಯಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುವ 42ನೇ ವರ್ಷದ ಗಣೇಶೋತ್ಸವ ಆಚರಣೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ನಡೆಯುವ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.21ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮುಡೆತ್ತಾಯ, ಅಧ್ಯಕ್ಷರಾದ ನವೀನ್ ನನ್ಯಪಟ್ಟಾಜೆ, ಗೌರವ ಸಲಹೆಗಾರರಾದ ಲೋಕೇಶ್ ಚಾಕೋಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ, ಜೊತೆ ಕಾರ್ಯದರ್ಶಿ ವಿಶ್ವನಾಥ ಕೆರೆಮಾರು, ಸದಸ್ಯರಾದ ಚಂದ್ರಶೇಖರ ಕೆ ಹೊಸಮನೆ, ವೆಂಕಪ್ಪ ಮೂಲ್ಯ, ನಹುಷ ಪಿ ವಿ, ಸೌಮ್ಯ ಬಾಲಸುಬ್ರಮಣ್ಯ ಮುಂಡಕೊಚ್ಚಿ, ಗೀತಾ ಮಾಣಿಯಡ್ಕ, ಯೋಗೀಶ್ ಹೊಸಮನೆ, ನಾರಾಯಣ ಆಚಾರ್ಯ ಮಳಿ, ಸುಪ್ರೀತ್ ಹೊಸಮನೆ, ಉಮೇಶ್ ಎಂ, ಗಣೇಶ್ ಕೆ, ಮಹೇಶ್ ಹೊಸಮನೆ, ದಿವ್ಯಪ್ರಸಾದ್ ಎ ಎಂ, ಸಂದೇಶ್ ಚಾಕೋಟೆ, ಚಿದಾನಂದ ನಾಯ್ಕ ಮಾಣಿಯಡ್ಕ, ಧರ್ಮಲಿಂಗಂ ಕಾವು, ಸುಂದರ ಪೂಜಾರಿ ಕೆರೆಮಾರು, ಆನಂದ ಹೊಸಮನೆ, ಐತ್ತಪ್ಪ ಗೌಡ ಪಳನೀರು, ಸಂಕಪ್ಪ ಪೂಜಾರಿ ಚಾಕೋಟೆ, ಹರೀಶ ಮಾಡ್ನೂರು, ವಿಶ್ವನಾಥ ಬಾಳೆಕೊಚ್ಚಿ, ಉಪಸ್ಥಿತರಿದ್ಧರು.