ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮ ಆಲಂಕಾರು ಶ್ರೀ ಭಾರತಿ ಶಾಖೆಯ ಅತಿಥ್ಯದಲ್ಲಿ ಆಲಂಕಾರು
ಮಾಯಿಲ್ಗ ಗದ್ದೆಯಲ್ಲಿ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಕೆಸರು ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರಾದ ಆನಂದ ಕುಂಟಿನಿ ವಹಿಸಿದ್ದರು.
ಶ್ರೀ ಭಾರತಿ ವಿದ್ಯಾಸಂಸ್ಥೆಯ ಅಧ್ಯಕರಾದ ಡಾ| ಸುರೇಶ್ ಕೂಡೂರು, ಆಲಂಕಾರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಆಲಂಕಾರು ಗ್ರಾ.ಪಂ ಅಧ್ಯಕ್ಷೆ
ಸುಶೀಲ, ಪೆರಾಬೆ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ ಕೆದ್ದೋಟೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸೇವಾ ವಿಭಾಗ ಸಮಿತಿಯ ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗದ್ದೆಯ ಮಾಲಿಕರು ಮನೋಹರ್ ಮಾಯಿಲ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಮಿತಿಯ ಶ್ರೀ ಭಾರತಿ ಶಾಖೆಯ ಯೋಗಬಂಧು ಮುತ್ತಪ್ಪ ಪ್ರಾರ್ಥಿಸಿ ಎಸ್.ಪಿ.ವೈ.ಎಸ್.ಎಸ್ ಸಮಿತಿಯ ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಸ್ವಾಗತಿಸಿ, ಮುರಳಿ ಮೋಹನ್, ಉಪ್ಪಿನಂಗಡಿ ನಗರ ವರದಿ ಪ್ರಮುಖರು ವಂದಿಸಿದರು. ಚೇತನ್ ಕುಮಾರ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯೋಗ ಬಂಧುಗಳಿಗೆ ಮತ್ತು ಅವರ ಕುಟುಂಬಿಕರಿಗೆ ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟಗಳನ್ನು ವೈಯಕ್ತಿಕ ಮತ್ತು ತಂಡದ ಮೂಲಕ ಮನರಂಜನೆ ಸಹಿತ ನಡೆಸಲಾಯಿತು.
ಸಮಾರೋಪ ಸಮಾರಂಭ….
ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ಭಾರತಿ ಶಾಖೆಯ ಶಿಕ್ಷಕಿ ಮಲ್ಲಿಕಾರವರು ವಹಿಸಿದ್ದರು. ನೇತ್ರಾವತಿ ವಲಯ ಸಮಿತಿಯ ನಿಕಟಪೂರ್ವ ಸಂಚಾಲಕರಾದ ಗೋಕುಲನಾಥ್ ಸಮಾರೋಪ ಭಾಷಣ ಮಾಡಿ ಯೋಗದ ಮಹತ್ವ ತಿಳಿಸಿದರು. ಉದ್ಯಮಿ ಕೇಶವ ಅಮೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಉಪ್ಪಿನಂಗಡಿ ನಗರ ಶಿಕ್ಷಣ ಪ್ರಮುಖ ಪ್ರದೀಪ್, ಸಮಿತಿಯ ಪ್ರಾಂತ ಸಂಚಾಲಕರು ರವೀಶ್ ಕುಮಾರ್, ಪ್ರಕಾಶ್ ಸಂಚಾಲಕರು ಮಂಗಳೂರು ನಗರ, ಸಹಸಂಚಾಲಕರುಗಳಾದ ದಾಮೋದರ್, ಗೀತಾ ಹಾಗು ಉಮೇಶ್ ಹಾಗೂ ಸ್ಥಳದ ಯಜಮಾನರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮರೋಪದ ಸಮಿತಿಯ ಉಪ್ಪಿನಂಗಡಿ ನಗರ ಶಿಕ್ಷಣ ಸಹಪ್ರಮುಖರಾದ ಕೃಷ್ಣಪ್ಪ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ನಾರಾಯಣ ನೆಕ್ಕರೆ ದನ್ಯವಾದ ಸಮರ್ಪಿಸಿದರು. ಗುರುಕಿರಣ್ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಅಗ್ನಿಹೋತ್ರ ಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ ,ಕಂಬಳದಕೋಣಗಳು,ಚೆಂಡೆವಾದನ ಗಳು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.
ಮಂಗಳೂರು ಹಾಗೂ ಉಪ್ಪಿನಂಗಡಿಯ 450ಕ್ಕೂ ಅಧಿಕ ಯೋಗ ಹಾಗೂ ಯೋಗೇತರ ಬಂಧುಗಳು ಭಾಗವಹಿಸಿದ್ದರು. ಎಲ್ಲಾ ಶಾಖೆಗಳ ಸಂಚಾಲಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.