ಕ್ಲಬ್‌ನಿಂದ ಕ್ರಿಯಾಶೀಲತೆ, ವ್ಯಕ್ತಿತ್ವ, ಆತ್ಮವಿಶ್ವಾಸ ಬೆಳೆಯುತ್ತದೆ-ಚಿತ್ರಾ ವಿ.ರಾವ್
ಪುತ್ತೂರು: ಇನ್ನರ್‌ವೀಲ್ ಕ್ಲಬ್‌ನಿಂದ ಕ್ರಿಯಾಶೀಲತೆ ಹೊರಗೆ ಬರಲು ಸಾಧ್ಯ. ಅಲ್ಲದೆ ನಮ್ಮಲ್ಲಿ ವ್ಯಕ್ತಿತ್ವ, ಆತ್ಮವಿಶ್ವಾಸ ಬೆಳೆಯುತ್ತದೆ. ಇಂತಹ ವೇದಿಕೆಯಾಗಿರುವ ಕ್ಲಬ್‌ನ್ನು ನಾವು ಮರೆಯಬಾರದು ಎಂದು ಚಿತ್ರಾ ವಿ. ರಾವ್ ಹೇಳಿದರು. ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಪುತ್ತೂರು ಇನ್ನರ್‌ವೀಲ್ ಕ್ಲಬ್‌ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನರ್‌ವೀಲ್ ಸುಂದರವಾದ ವೇದಿಕೆ. ಇದು ವಿಶ್ವದ ದೊಡ್ಡ ಅಸೋಸಿಯೇಶನ್ ಆಗಿದೆ. ಪುತ್ತೂರು ಕ್ಲಬ್‌ಗೆ ಬರುವುದು ನನಗೆ ಸಂತೋಷವಾಗುತ್ತಿದೆ. ಸ್ನೇಹ ಮತ್ತು ಸೇವೆ ನೀಡುವುದು ಕ್ಲಬ್‌ನ ಧ್ಯೇಯವಾಗಿದೆ. ಇವೆರಡನ್ನು ಒಟ್ಟಿಗೆ ನೀಡಲು ಕ್ಲಬ್ ಒಂದು ವೇದಿಕೆಯಾಗಿದೆ. ಸ್ನೇಹದಿಂದ, ಸಂತೋಷದಿಂದ ಜತೆಗೂಡಲು ಸಾಧ್ಯವಾಗುತ್ತದೆ ಎಂದರು. ಹಲವು ವಿಷಯಗಳನ್ನು ಹಂಚಿಕೊಳ್ಳಲು ಕ್ಲಬ್ ಸಹಾಯಕಾರಿ. ಮಾತ್ರವಲ್ಲ ಸಮಾಜಮುಖಿಯಾಗಿ ನಮ್ಮನ್ನು ತೆರೆದುಕೊಂಡಾಗ, ಒಂದು ರೀತಿಯ ಸಂತೃಪ್ತ ಭಾವ ಮೂಡುತ್ತದೆ. ಮನೆಯಿಂದ ಹೊರಗೆ ಬಂದಾಗ ಸಮಾಜದ ಸಮಸ್ಯೆಗಳು ತಿಳಿಯುತ್ತದೆ. ಇದರ ಮುಂದೆ ನಮ್ಮ ಸಮಸ್ಯೆ ದೊಡ್ಡ ವಿಷಯವೇ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ ಎಂದ ಅವರು ಕ್ಲಬ್‌ನಿಂದ ಸಾಧನೆ ಮಾಡಿದ ಹಲವು ಮಹಿಳೆಯರಿದ್ದಾರೆ. ಅಂತಹ ಸಾಧಕ ಮಹಿಳೆಯರು ನಮಗೆ ಸ್ಫೂರ್ತಿಯಾಗಬೇಕು. ಎಲ್ಲಾ ಕ್ಲಬ್‌ಗಳು ಒಂದೇ. ಯಾವುದು ಮೇಲು ಕೀಳು ಇಲ್ಲ. ಕ್ಲಬ್‌ನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಿ. ಮಾಡುವ ಯೋಜನೆಗಳು ಸರಿಯಾದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಕ್ಲಬ್‌ನ ವಿಷನ್ ಬೋರ್ಡ್ ಪ್ರಕಾರ ಕೆಲಸ ಮಾಡುತ್ತೇನೆ-ರೂಪಲೇಖ ಪಾಣಾಜೆ:
ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ರೂಪಲೇಖ ಪಾಣಾಜೆ ಮಾತನಾಡಿ ನಾನು 20 ವರ್ಷದಿಂದ ಕ್ಲಬ್ ಸದಸ್ಯೆಯಾಗಿದ್ದೇನೆ. ಎಲ್ಲರ ಗೌರವದಿಂದ ನಾನು ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಉತ್ತಮ ತಂಡ ತನ್ನೊಂದಿಗಿದ್ದು, ಅವರ ಸಹಕಾರದಿಂದ ಖಂಡಿತವಾಗಿಯೂ ಕ್ಲಬ್‌ನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ. Step up & Lead by Example ಎನ್ನುವ ಉತ್ತಮ ಥೀಮ್ ಈ ವರ್ಷದ್ದಾಗಿದೆ. ಕ್ಲಬ್‌ನ ವಿಷನ್ ಬೋರ್ಡ್ ಪ್ರಕಾರ ಕೆಲಸ ಮಾಡುತ್ತೇನೆ. ಈ ಚೌಕಟ್ಟಿನೊಳಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತೇನೆ. ನಮ್ಮ ಕೆಲಸ ನಮ್ಮ ಮಾತಿಗಿಂತ ಹೆಚ್ಚಿನ ಪ್ರಭಾವಶಾಲಿ ಎಂಬ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು.
ಒಂದೇ ಸಂಸ್ಥೆಯೆಂಬ ಭಾವನೆಯಿಂದ ಕೆಲಸ ಮಾಡೋಣ- ಡಾ. ಶ್ರೀಪ್ರಕಾಶ್:
ಕ್ಲಬ್‌ನ ಬುಲೆಟಿನ್ ಬಿಡುಗಡೆ ಮಾತನಾಡಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಮಾತನಾಡಿ ವಿಶ್ವದಲ್ಲಿ ರೋಟರಿ ಕ್ಲಬ್ ಅಗ್ರಮಾಣ್ಯ ಗೌರವ ಪಡೆದುಕೊಂಡಿದೆ. ರೋಟಿ ಬಹಳಷ್ಟು ಕಾರ್ಯಕ್ರಮ ನಡೆಸುತ್ತಿದೆ. ಸಹಸಂಸ್ಥೆ ಎಂಬ ಭಾವನೆ ಯಾರಿಗೂ ಬೇಡ. ಒಂದೇ ಸಂಸ್ಥೆಯೆಂಬ ಭಾವನೆಯಿಂದ ಎಲ್ಲಾ ಕ್ಲಬ್‌ಗಳು ಜೊತೆಯಾಗಿ ಸಮಾಜಮುಖಿಯಾಗಿ ಕೆಲಸ ಮಾಡೋಣ. ಸ್ವಾರ್ಥರಹಿತವಾಗಿ ರೋಟರಿ ಹಾಗೂ ಇನ್ನರ್ ವ್ಹೀಲ್‌ನ ಧ್ಯೇಯದಂತೆ ಮುನ್ನಡೆಯೋಣ ಎಂದರು.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ-ರಾಜೇಶ್ವರಿ ಆಚಾರ್:
ನೂತನ ಅಧ್ಯಕ್ಷರಿಗೆ ಪದಪ್ರದಾನ ನೆರವೇರಿಸಿದ ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಮಾತನಾಡಿ ಇನ್ನರ್‌ವೀಲ್ ಕ್ಲಬ್‌ನ ಸುವರ್ಣ ವರ್ಷದ ಅಧ್ಯಕ್ಷಳಾಗಿ ಸುಮಾರು 60ಕ್ಕೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮ ಮಾಡಿದ್ದೇವೆ. ರೋಟರಿ ಸಂಸ್ಥೆಯ ಸಹಕಾರದಲ್ಲಿ ಸರಕಾರಿ ಆಸ್ಪತ್ರೆಗೆ ಫಿಜಿಯೋತೆರಪಿ ಸಲಕರಣೆ ನೀಡಿದ್ದೇವೆ. ಅಲ್ಲದೆ 50 ವರ್ಷದ ಸವಿನೆನಪಿಗೆ ಕನಕ ಸಂಭ್ರಮ ಕಾರ್ಯಕ್ರಮ ಮಾಡಲಾಗಿದೆ. ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ. ಪ್ರತಿಯೊಂದು ಸವಾಲುಗಳು ನನ್ನನ್ನು ಸದೃಢಳನ್ನಾಗಿ ಮಾಡಿದೆ. ನಮ್ಮ ಸಹಕಾರ ಹೀಗೆ ಮುಂದುವರಿಯುತ್ತದೆ ಎಂದು ಹೇಳಿದ ಅವರು ಹೊಸ ತಂಡಕ್ಕೆ ಶುಭಹಾರೈಸಿದರು.
ನೂತನ ಸದಸ್ಯರಿಗೆ ಸ್ವಾಗತ:
ಕ್ಲಬ್‌ಗೆ ಹೊಸ ಸದಸ್ಯರಾಗೆ ಸೇರಿದ ಡಾ. ಪಲ್ಲವಿ ಅಜಿತ್, ಶ್ರುತಿ ಎಸ್. ಬಂಗೇರ, ಮಧುಮಿತಾ ರಾವ್ ಪಡುಮಲೆ, ಅರುಣಾ ದಿನಕರ್ ರೈ ಅವರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ಲಲಿತಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕ್ಲಬ್‌ನ ಬುಲಟೆಟಿನ್ ಬಿಡುಗಡೆ:
ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಕ್ಲಬ್‌ನ ಬುಲೆಟಿನ್ ಬಿಡುಗಡೆಗೊಳಿಸಿದರು. ನೂತನ ಬುಲೆಟಿನ್ ಸಂಪಾದಕರಾದ ಕೃಷ್ಣವೇಣಿ ಮುಳಿಯ ಬುಲೆಟಿನ್ ವಿವರ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ:
ಕಳೆದ ಸಾಲಿನಲ್ಲಿ 62 ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಸಸ್ವಿಗೊಳಿಸಿದ ಕ್ಲಬ್‌ನ ನಿರ್ಗಮಿತ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಹಾಗೂ ನಿರ್ಗಮಿತ ಕಾರ್ಯದರ್ಶಿ ವಚನಾ ಜಯರಾಂ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಚಿತ್ರಾ ವಿ. ರಾವ್ ಹಾಗೂ ನಿರ್ದೇಶಕಿ ಪ್ರಮೀಳಾ ರಾವ್‌ರವರನ್ನು ಸನ್ಮಾನಿಸಲಾಯಿತು.
ಗೌರವಾರ್ಪಣೆ:
ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ವಿಟ್ಲ ಶಾಖೆಯ ಮುಖ್ಯ ಪ್ರಬಂಧಕರಾಗಿ ಪದೋನ್ನತಿ ಪಡೆದ ಜ್ಯೋತಿ ರಾಕೇಶ್‌ರವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಹಿತಾಲಿ ಪಿ. ಶೆಟ್ಟಿ, ರಿಧಿಮಾ ಆಚಾರ್ ಹಾಗೂ ಅಖಿಲ್ ರಾಯ್ ಡಿಸೋಜಾರವರನ್ನು ಗೌರವಿಸಲಾಯಿತು.
ನ್ಯಾಪ್‌ಕಿನ್ ಬರ್ನರ್ ಕೊಡುಗೆ:
ಕುದ್ಮಾರು ಹಿ.ಪ್ರಾ. ಶಾಲೆಗೆ ನ್ಯಾಪ್‌ಕಿನ್ ಬರ್ನರ್ ಮೆಷಿನ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಮುಖ್ಯಶಿಕ್ಷಕರಿಗೆ ನ್ಯಾಪ್‌ಕಿನ್ ಬರ್ನರ್ ಹಸ್ಥಾಂತರಿಸಲಾಯಿತು.
ಮುಖ್ಯ ಅತಿಥಿ ಚಿತ್ರಾ ವಿ. ರಾವ್ ಕ್ಲಬ್‌ನ ಧ್ವಜ ಬಿಡುಗಡೆಗೊಳಿಸಿದರು. ನಿಯೋಜಿತ ಕಾರ್ಯದರ್ಶಿ ಸಂಧ್ಯಾ ಸಾಯ ಗಣ್ಯರು ಕಳಿಸಿದ ಸಂದೇಶ ವಾಚಿಸಿದರು. ಕಾರ್ಯದರ್ಶಿ ವಚನಾ ಜಯರಾಂ ವರದಿ ವಾಚಿಸಿದರು. ಮುಖ್ಯ ಅತಿಥಿಯನ್ನು ರಾಜೀಬಲರಾಮ ಆಚಾರ್ಯ ಸಭೆಗೆ ಪರಿಚಯಿಸಿದರು. ಮೇಘನಾ ಪಾಣಾಜೆ ಪ್ರಾರ್ಥಿಸಿ, ಅಧ್ಯಕ್ಷೆ ರಾಜೇಶ್ವರಿ ಆಚಾರ್ ಸ್ವಾಗತಿಸಿದರು. ನೂತನ ಉಪಾಧ್ಯಕ್ಷೆ ಮನೋರಮಾ ಸೂರ್ಯ ವಂದಿಸಿ, ದೀಪಿಕಾ ಹಾಗೂ ಸೀಮಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಲಬ್‌ನ ಪದಾಧಿಕಾರಿಗಳಾದ ಕೆ.ಆರ್.ಶೆಣೈ, ಜೈರಾಜ್ ಭಂಡಾರಿ, ರಾಮಕೃಷ್ಣ, ಕುಸುಮರಾಜ್, ಉಮೇಶ್ ನಾಯಕ್, ಅಭೀಷ್, ಜಯಪ್ರಕಾಶ್, ಎಮ್.ಎಸ್.ಭಟ್, ಚಂದ್ರಹಾಸ ರೈ, ಜೀವನ್, ಉಲ್ಲಾಸ್ ಪೈ, ಶ್ರೀಪತಿ ರಾವ್, ಸುಧಾ ಎಸ್.ರಾವ್, ಶ್ರೀಕಾಂತ್ ಕೊಳತ್ತಾಯ, ಬಾಲಕೃಷ್ಣ ಕೊಳತ್ತಾಯ, ಗುರು ಕೊಳತ್ತಾಯ ಸೇರಿದಂತೆ ಹಲವು ಸದಸ್ಯರು ಹಾಗೂ ಇನ್ನರ್‌ವೀಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಪದಪ್ರದಾನ – ಅಧಿಕಾರಿ ಸ್ವೀಕಾರ
2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು. ಬಳಿಕ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರ ನಡೆಯಿತು. ನೂತನ ಅಧ್ಯಕ್ಷರಾಗಿ ರೂಪಲೇಖ ಪಾಣಾಜೆರರಿಗೆ ಕ್ಲಬ್‌ನ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ಪದಪ್ರದಾನ ನೆರವೇರಿಸಿ ಅಧಿಕಾರ ಹಸ್ತಾಂತರಿಸಿದರು. ನೂತನ ಉಪಾಧ್ಯಕ್ಷರಾದ ಮನೋರಮ ಸೂರ್ಯ, ಕಾರ್ಯದರ್ಶಿಯಾದ ಸಂಧ್ಯಾ ಸಾಯ, ಕೋಶಾಧಿಕಾರಿಯಾದ ಲವ್ಲೀ ಸೂರಜ್ ನಾಯರ್, ಐ.ಎಸ್.ಓ. ಆದ ವೇದಲಕ್ಷ್ಮೀಕಾಂತ್, ಬುಲೆಟಿನ್ ಸಂಪಾದಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯರವರಿಗೆ ನೂತನ ಅಧ್ಯಕ್ಷೆ ರೂಪಲೇಖ ಪಾಣಾಜೆ ಪದಪ್ರದಾನ ಮಾಡಿದರು. ನಿರ್ದೇಶಕರಾಗಿ ವೀಣಾ ಕೊಳತ್ತಾಯ, ಶಂಕರಿ ಎಂ.ಎಸ್. ಭಟ್, ಪ್ರಮೀಳಾ ರಾವ್, ಶೋಭಾ ಕೊಳತ್ತಾಯ, ಸೆನೋರಿಟಾ ಆನಂದ್ ಅಧಿಕಾರ ಸ್ವೀಕರಿಸಿದರು.
ವಿದ್ಯಾನಿಧಿ ವಿತರಣೆ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು. ಕ್ಲಬ್ ನಿರ್ದೇಶಕಿ ಶಂಕರಿ ಭಟ್ ಮತ್ತಿ ಎಂ.ಎಸ್.ಭಟ್‌ರವರ ಪ್ರಯೋಜಕತ್ವದಲ್ಲಿ ವಿದ್ಯಾರ್ಥಿಗಳಾದ ಸೃಜನ್‌ರವರಿಗೆ ರೂ.10,000 ಹಾಗೂ ಸಾಯೀಶ್ವರಿರವರಿಗೆ ರೂ.10,500 ಹಸ್ತಾಂತರಿಸಲಾಯಿತು. ರಾಜೀ ಬಲರಾಮ್ ಮತ್ತು ನೂತನ ಐಎಸ್‌ಒ ವೇದಲಕ್ಷ್ಮೀಕಾಂತ್‌ರವರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ರಕ್ಷಾ ಪಿ.ರವರಿಗೆ ರೂ.10000 ಹಾಗೂ ನೂತನ ಅಧ್ಯಕ್ಷೆ ರೂಪಲೇಖಾ ಪಾಣಾಜೆರವರವ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ವೈಭವ್ ಪೂಜಾರಿರವರಿಗೆ ರೂ.10000 ಹಸ್ತಾಂತರಿಸಲಾಯಿತು.