ಶಾಸಕರು ನುಡಿದಂತೆ ನಡೆಯುತ್ತಿದ್ದಾರೆ-ಇಕ್ಬಾಲ್ ಹುಸೇನ್
ಪುತ್ತೂರು: ರೂ.40 ಲಕ್ಷ ಅನುದಾನದಲ್ಲಿ ಅರಿಯಡ್ಕ-ಶೇಖಮಲೆ-ಪಯಂದೂರು ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಂ ಹನೀಫ್ ಅರಿಯಡ್ಕ, ಸಾದಾತ್ ಜಾರತ್ತಾರು, ಸಿರಾಜ್ ಪಯಂದೂರು, ತ್ವಾಹಿರ್ ಪಯಂದೂರು, ಅಬೂಬಕ್ಕರ್ ಕೌಡಿಚ್ಚಾರ್ ಉಪಸ್ಥಿತರಿದ್ದರು.
ಅರಿಯಡ್ಕ ಗ್ರಾಮದ ಪಯಂದೂರಿನಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಇದೇ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈಯವರು ನುಡಿದಂತೆ ನಡೆಯುತ್ತಿದ್ದು ನಮಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಶಾಸಕರ ಮುತುವರ್ಜಿಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಕಾಣುತ್ತಿದೆ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹೇಳಿದರು.
