ಕಾಣಿಯೂರು: ಕಾಣಿಯೂರು ಕಣ್ವರ್ಷಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 70ನೇ ವರ್ಷದ ಬಿ.ಎಮ್.ಎಸ್ ಸ್ಥಾಪನಾ ದಿನಾಚರಣೆಯನ್ನು ಜು.23ರಂದು ಆಚರಿಸಲಾಯಿತು. ಕಾಣಿಯೂರು ಕಣ್ವರ್ಷಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕರವರು ಧ್ವಜಕ್ಕೆ ಪುಪ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಬೆದ್ರಾಜೆ, ಸಂಘದ ಗೌರವ ಸಲಹೆಗಾರ ಪರಮೇಶ್ವರ ಅನಿಲ, ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಮಾದೋಡಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
