ಪುತ್ತೂರು: 2024 – 25 ನೇ ಸಾಲಿನ ಲಯನ್ಸ್ ಸೇವೆಯಲ್ಲಿ ಪುತ್ತೂರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಗ್ರಾಹಕ ಜಾಗೃತಿಯಲ್ಲಿ ಪ್ರಥಮ ಸ್ಥಾನ ಹಾಗೂ ಕಾನೂನು ಜಾಗೃತಿಯಲ್ಲಿ ಮೂರನೇ ಸ್ಥಾನವನ್ನು ಜಿಲ್ಲೆಯ 20 ವರ್ಷ ಮೇಲ್ಪಟ್ಟ ಕ್ಲಬ್ ಸಾಲಿನಲ್ಲಿ ಪುತ್ತೂರು ಲಯನ್ಸ್ ಕ್ಲಬ್ ಪಡೆದುಕೊಂಡಿದೆ.
ಬೆಸ್ಟ್ ಡಿಸ್ಟ್ರಿಕ್ಟ್ ಅಂಬಾಸಿಡರ್ ಅವಾರ್ಡ್ ಸುದರ್ಶನ್ ಪಡಿಯಾರ್, ಮುಖ್ಯ ಜಿಲ್ಲಾ ಸಹ-ಸಂಯೋಜಕ ಆರೋಗ್ಯ ಶಿಬಿರ ಟಿ. ಸದಾನಂದ ಶೆಟ್ಟಿ, ಡೈಮಂಡ್ ಅಸೋಸಿಯೇಟ್ ಜಿಲ್ಲಾ ಸಹ-ಸಂಯೋಜಕ ಆನಂದ ರೈ, ಗೋಲ್ಡನ್ ಝೋನ್ ರಾಯಭಾರಿ ಸದಾಶಿವ ಟಿ, ಅತ್ಯುತ್ತಮ ಮತ್ತು ಅಸಾಧಾರಣ ನಾಯಕತ್ವ ಪ್ರಶಸ್ತಿಯನ್ನು ಅಧ್ಯಕ್ಷೆ ಪ್ರೇಮಲತಾ ರಾವ್, ಕಾರ್ಯದರ್ಶಿ ಎಸ್. ಅರವಿಂದ್ ಭಗವಾನ್ ರೈ ಮತ್ತು ಖಜಾಂಚಿ ಸುಧಾಕರ ಕೆ.ಪಿ. ಅವರನ್ನು ಗುರುತಿಸಿ ಗೌರವಿಸಲಾಗಿದೆ. ಗೋಲ್ಡನ್ ಡಿಸಿ ಹಿರಿಯ ನಾಗರಿಕರ ಕೇರ್ ವತ್ಸಲ ರಜನಿ, ಗೋಲ್ಡನ್ ಡಿಸಿ ಸ್ವಚ್ಛತಾ ಅಭಿಯಾನ ಜಯಶ್ರೀ ಎಸ್ ಶೆಟ್ಟಿ ಅವರು ಪಡೆದುಕೊಂಡಿದ್ದಾರೆ ಎಂದು ಲಯನ್ಸ್ ಅಧ್ಯಕ್ಷೆ ಪ್ರೇಮಲತಾ ರಾವ್ ತಿಳಿಸಿದ್ದಾರೆ.