ನೂಜಿಬಾಳ್ತಿಲಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ

0

ಕಡಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿನಾಯಕ ಕರ್ಬಾರಿ ಅವರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಭೇಟಿ ನೀಡಿ ಜಲ್‌ಜೀವನ್ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.


ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಯಡ್ಕ ಶಾಲಾ ಬಳಿ ಹಾಗೂ ಕನ್ವಾರೆ ಬಳಿ ನಿರ್ಮಾಣಗೊಂಡಿರುವ ಜಲ್‌ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಟ್ಯಾಂಕ್ ವೀಕ್ಷಿಸಿ, ಎಂಜೀನಿಯರ್‌ಗಳಿಂದ ಮಾಹಿತಿ ಪಡೆದರು. ಹಾಗೂ ಯೋಜನೆಯ ಪೈಪ್‌ಲೈನ್ ಹಾಗೂ ಇತರೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.


ಬಳಿಕ ಪರಿಸರದ ವಿವಿಧ ಮನೆಗಳಿಗೆ ತೆರಳಿ ಜಲ್‌ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಳ್ಳಿಯಿಂದ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿದಿಯೇ ಎಂದು ಪರಿಶೀಲನೆ ನಡೆಸಿ, ಮನೆಯವರಿಂದ ಮಾಹಿತಿ ಪಡೆದರು. ನೀರು ಬರುತ್ತಿರುವ ಬಗ್ಗೆ ಮನೆಯವರು ಸಿಇಒ ಅವರಿಗೆ ತಿಳಿಸಿದರು. ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‌ನವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ತಿಳಿಸಿದರು.


ಗ್ರಾಮ ಪಂಚಾಯತ್‌ಗೆ ಭೇಟಿ:
ಸಿಇಒ ವಿನಾಯಕ ಕರ್ಬಾರಿ ಅವರು, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿದರು. ಗ್ರಾಮ ಪಂಚಾಯತ್ ವತಿಯಿಂದ ನೂತನ ಸಿಇಒ ಅವರನ್ನು ಸ್ವಾಗತಿಸಲಾಯಿತು. ಬಳಿಕ ಸಿಇಒ ಅವರು ತೆರಿಗೆ ಸಂಗ್ರಹ ಹಾಗೂ ನರೇಗಾ ಯೋಜನೆಯ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ, ದಾಖಲೆ ಪತ್ರಗಳನ್ನು, ಕಡತಗಳನ್ನು ಪರಿಶೀಲಿಸಿದರು.
ಕಡಬ ತಾಲೂಕು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಎಂಜೀನಿಯರ್ ಹುಕ್ಕೇರಿ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ನೂಜಿ, ಸದಸ್ಯೆ ಗಂಗಮ್ಮ ಕಲ್ಲುಗುಡ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here