ಡಿಸಿಸಿ‌ ಬ್ಯಾಂಕ್ ನಿಂದ ಜೇನು ವ್ಯವಸಾಯಗಾರರ ಸಹಕಾರ ಸಂಘಕ್ಕೆ ರೂ.5ಲಕ್ಷ‌ ದೇಣಿಗೆ

0

ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ರೂ.5ಲಕ್ಷ‌ ದೇಣಿಗೆ ನೀಡಿದ್ದಾರೆ.

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವತಿಯಿಂದ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿದ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಅಧ್ಯಕ್ಷ ಡಾ| ಎಮ್ ಎನ್ ರಾಜೇಂದ್ರ ಕುಮಾರ್ ರೂ.5 ಲಕ್ಷ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು.

ಈ ಮೊತ್ತದ ಚೆಕ್ ನ್ನು ಜು.23ರಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಬ್ಯಾಂಕ್ ನ ಪುತ್ತೂರು ಪ್ರಧಾನ‌ ಶಾಖೆಯ ವ್ಯವಸ್ಥಾಪಕ ಹರೀಶ್ ರೈ ಪಿ., ಮಾರಾಟಾಧಿಕಾರಿ ಆದರ್ಶ ಅವರು ಸಂಘಕ್ಕೆ ಭೇಟಿ‌ ನೀಡಿ ಸಂಘದ ಅಧ್ಯಕ್ಷ ಚಂದ್ರ‌ ಕೋಲ್ಚಾರ್ ಅವರಿಗೆ ಹಸ್ತಾಂತರಿಸಿದರು. ಸಂಘದ ಪ್ರಭಾರ ಆಡಳಿತ ನಿರ್ದೇಶಕ ಜನಾನಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here